ನ್ಯೂಸ್ ನಾಟೌಟ್: ಭಾರತ ಗ್ರಂಥಾಲಯ ಪಿತಾಮಹಾ ಡಾ.ಎಸ್.ಆರ್. ರಂಗನಾಥನ್ ಅವರ 132ನೇ ಜನ್ಮ ದಿನ ಮತ್ತು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಎನ್ನೆಂಸಿ ಗ್ರಂಥಾಲಯದಲ್ಲಿ ನಡೆಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್, ಗ್ರಂಥಾಲಯವನ್ನು ವೈಜ್ಞಾನಿಕವಾಗಿ ಕ್ರಮಬದ್ಧಗೊಳಿಸುವಲ್ಲಿ ಗ್ರಂಥಾಲಯ ವಿಜ್ಞಾನಿ ಹಾಗೂ ಗಣಿತಜ್ಞರಾಗಿದ್ದ ಡಾ. ಎಸ್.ಆರ್.ರಂಗನಾಥ ನ್ರವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಕಾಲೇಜಿನ ವಾಣಿಜ್ಯಶಾಸ್ತ್ರ ಹಿರಿಯ ಉಪನ್ಯಾಸಕ ಶ್ರೀಧರ್ ವಿ. ಮಾತನಾಡಿ, ಹೆಚ್ಚು ಗ್ರಂಥಾಲಯದ ಒಡನಾಟದಿಂದ ಉತ್ತಮ ಭವಿಷ್ಯ ಪಡೆಯಬಹುದು. ಗ್ರಂಥಾಲಯದಲ್ಲಿ ಅತ್ಯುತ್ತಮ ಗ್ರಂಥಗಳು ಲಭ್ಯವಿದ್ದು, ಅದನ್ನು ಸದುಪಯೋಗಪಡಿಸಕೊಂಡು ಮುಂದಿನ ಉನ್ನತ ಶಿಕ್ಷಣವನ್ನುಸುಲಭಗೊಳಿಸಬಹುದು ಎಂದು ಹೇಳಿದರು. ತೃತೀಯ ಬಿಸ್ಸಿಯ ಉಜಾನ ಮತ್ತು ರಕ್ಷಿತಾ ಪ್ರಾರ್ಥಿಸಿದರು. ಗ್ರಂಥಪಾಲಕ ಶ್ರೀ ಉಮೇಶ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಹಿರಿಯ ಉಪನ್ಯಾಸಕಿ ಶ್ರೀಮತಿ ದಿವ್ಯಾ ಟಿ.ಎಸ್. ವಂದಿಸಿದರು.