ನ್ಯೂಸ್ ನಾಟೌಟ್: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪಿಸಲ್ಪಟ್ಟ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲ್ಪಡುವ ಸುಳ್ಯ ಮೊಸರುಕುಡಿಕೆ ಉತ್ಸವ ಸೆ.4 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಎದುರು, ಗೋಪುರ ಮೊಸರು ಕುಡಿಕೆ ಮತ್ತು ಧಾರ್ಮಿಕ ಸಭೆ, ಶೋಭಾಯಾತ್ರೆಯೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.
ಕಾರ್ಯಕ್ರಮವನ್ನು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರರು ಡಾ| ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಲಿದ್ದಾರೆ. ಸಾಯಂಕಾಲ 6ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಎ.ವಿ ತೀರ್ಥರಾಮ ಅಧ್ಯಕ್ಷತೆ, ಗಣಪತಿ ಭಟ್ ಮಜಿಗುಂಡಿ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಉಪನ್ಯಾಸಕರಾಗಿ ಪ್ರತಾಪ್ಸಿಂಹ, ಗೌರವ ಉಪಸ್ಥಿತಿ ಕೇಪು ಅಜಿಲ, ಮುಖ್ಯ ಅತಿಥಿಗಳಾಗಿ ಪ್ರದೀಪ್ ಸರಿಪಲ್ಲ , ಪುನೀತ್ ಅತ್ತಾವರ , ಶ್ರೀಧರ್ ತೆಂಕಿಲ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಶೋಭಾಯಾತ್ರೆ ಪಥವು ಚೆನ್ನಕೇಶವ ದೇವಸ್ಥಾನದಿಂದ ಮೊದಲ್ಗೊಂಡು, ಎ.ಪಿ.ಎಂ.ಸಿ ಕುರುಂಜಿಭಾಗ್, ವೇದಶ್ರೀ ಕಾಂಪ್ಲೆಕ್ಸ್ ಕೆ.ಇ.ಬಿ. ಬಳಿ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಕುರುಂಜಿಕಾರ್ ವೀಸಾ ಆರ್ಕೆಡ್, ರೈ ಇಂಡಿಯನ್ ಗ್ಯಾಸ್ ಮುಂಭಾಗ, ಶಾಸ್ತ್ರಿ ಸರ್ಕಲ್ , ಕಶ್ಯಪ ಕಾಂಪ್ಲೆಕ್ಸ್ , ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಆಟೋ ವರ್ಕ್ಸ್ ಮುಂಭಾಗ, ಭಗವತಿ ಹಾರ್ಡ್ವೇರ್ ಮುಂಭಾಗ, ಚೆನ್ನಕೇಶವ ದೇವಸ್ಥಾನದ ಬಳಿ ವಿಶೇಷ ಆಕರ್ಷಣೆ ಅಟ್ಟಿ ಮಡಿಕೆ ನಡೆಯಲಿದೆ.
ಬಹುಮಾನಗಳು: ಪ್ರಥಮ ರೂ. 15,060/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ.10,060/- ಮತ್ತು ಶಾಶ್ವತ ಫಲಕ, ತೃತೀಯ ರೂ. 7,060/- ಮತ್ತು ಶಾಶ್ವತ ಫಲಕ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಸಮಸ್ತ ಹಿಂದೂ ಬಾಂಧವರು, ಹಿಂದೂ ಧಾರ್ಮಿಕ ಸಂಘಟನೆಗಳು ಈ ಉತ್ಸವವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ತಿಳಿಸಿದ್ದಾರೆ.