ನ್ಯೂಸ್ ನಾಟೌಟ್: ಕಳೆದ ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸುಳ್ಯದ ಬಾಲಕನೋರ್ವ ಜೀವನ್ಮರಣ ಹೋರಾಟ ನಡೆಸಿ ಸಾವಿಗೀಡಾಗಿದ್ದಾರೆ.
ಸೈಂಟ್ ಬ್ರಿಜಿಡ್ಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಹಾರ್ದಿಕ್ ಆ.20ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹಾರ್ದಿಕ್ ಗೆ ಸಣ್ಣ ವಯಸ್ಸಿನಿಂದಲೇ ಕಿಡ್ನಿ ಸಮಸ್ಯೆ ಇತ್ತು. ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೆಲವು ದಿನಗಳ ಹಿಂದೆ ಶಿಕ್ಷಕರ ದಿನಾಚರಣೆ ನಡೆದಿತ್ತು. ಈ ವೇಳೆ ಮಕ್ಕಳು ಶಿಕ್ಷಕರಿಗೆ ಉಡುಗೊರೆ ಕೊಡುವ ಬದಲು ಈ ವಿದ್ಯಾರ್ಥಿಯ ಚಿಕಿತ್ಸೆಗೆ ನೆರವು ನೀಡಿ ಎಂದು ಹೇಳಲಾಗಿತ್ತು. ಅಂತೆಯೇ ಪೋಷಕರು ನೆರವು ನೀಡಿದ್ದರು. ಮಗು ಬದುಕಿ ಬರಲಿ ಎಂದು ನೂರಾರು ದೇವರಿಗೆ ಪ್ರಾರ್ಥನೆ ಮಾಡಿದರೂ ಪ್ರಾರ್ಥನೆ ಫಲಿಸಲಿಲ್ಲ.
ಇದೀಗ ಶಾಲೆಯತ್ತ ಬಾಲಕನ ಮೃತದೇಹ ತರಲಾಗುತ್ತಿದೆ. ಅಲ್ಲಿ ಅಂತಿಮ ದರ್ಶನ ನಡೆಸಿದ ಬಳಿಕ ಹುಟ್ಟೂರಾದ ಬಾಳುಗೋಡಿನ ಉಪ್ಪುಕುಳದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತರು ತಂದೆ ವಿಜಯ ಕುಮಾರ್, ತಾಯಿ ಪ್ರೇಮಲತಾ ಮತ್ತು ಸಹೋದರಿ ತೃತ್ವಿ ಅವರನ್ನು ಅಗಲಿದ್ದಾರೆ.