ನ್ಯೂಸ್ ನಾಟೌಟ್: ಉರಗ ತಜ್ಞರು ಬರುವುದಕ್ಕೆ ಸ್ವಲ್ಪ ತಡವಾಗುತ್ತಿದ್ದಂತೆ ಬೃಹತ್ ಹೆಬ್ಬಾವನ್ನು ಮಂಗಳೂರಿನ ಮಹಿಳೆಯೊಬ್ಬರು ಹರಸಾಹಸ ಪಟ್ಟು ಹಿಡಿದು ಸುದ್ದಿಯಾಗಿದ್ದಾರೆ.
ಮಂಗಳೂರಿನ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್ ಮನೆಯ ಕೊಟ್ಟಿಗೆಯಲ್ಲಿದ್ದ ಸುಮಾರು 9 ಅಡಿ ಉದ್ದದ ಹೆಬ್ಬಾವನ್ನ ಲಕ್ಷ್ಮೀ ಕಾಮತ್ ಅವರು ಹಿಡಿದು ರಕ್ಷಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇತ್ತೀಚಿಗೆ ಅವರ ಮನೆಯ ಹಟ್ಟಿಯ ಸಮೀಪಕ್ಕೆ ರಾತ್ರಿ ಹೆಬ್ಬಾವು ಬಂದಿತ್ತು. ಅದನ್ನು ನೋಡಿದ ಸ್ಥಳೀಯರು ಕೂಡ ಅದನ್ನು ಹಿಡಿದು ರಕ್ಷಿಸಲು ಮುಂದಾಗಲಿಲ್ಲ. ಉರಗ ತಜ್ಞರಿಗೂ ತಿಳಿಸಲಾಯಿತು. ಆದರೆ ಅವರು ಬರುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ವತಃ ಲಕ್ಷ್ಮೀ ಕಾಮತ್ ಅವರೇ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಧೈರ್ಯ ಮಾಡಿ ಹೆಬ್ಬಾವನ್ನು ಹಿಡಿದು ಉರಗ ತಜ್ಞ ಆದಿತ್ಯ ಅವರ ನೆರವಿನೊಂದಿಗೆ ಗೋಣಿ ಚೀಲಕ್ಕೆ ತುಂಬಿಸಿದ್ದಾರೆ. ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿ ಬಿಡಲಾಗಿದೆ.