- +91 73497 60202
- [email protected]
- November 22, 2024 6:09 AM
ನ್ಯೂಸ್ ನಾಟೌಟ್: ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ನೈರೋಬಿ ಸೀರಿಯಲ್ ಕಿಲ್ಲರ್ ಜೈಲಿನಿಂದ ಪರಾರಿಯಾಗಿದ್ದಾನೆ.ಆಗಸ್ಟ್ 19ರಂದು ನೈರೋಬಿ ಜೈಲಿನಿಂದ ಸರಣಿ ಹಂತಕ 33 ವರ್ಷದ ಕಾಲಿನ್ಸ್ ಜುಮೈಸಿ ಖಲುಶಾ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಕೀನ್ಯಾ ನ್ಯಾಷನಲ್ ಪೊಲೀಸ್ ಸರ್ವಿಸ್ ತಿಳಿಸಿದೆ. ಖಲುಶಾ ಎಂಬಾತ ತನ್ನ ಹೆಂಡತಿಯೂ ಸೇರಿದಂತೆ 42 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾನೆ.ಈ ಹಿಂದೆ ನೈರೋಬಿಯ ಕ್ವಾರಿಯೊಂದರಲ್ಲಿ ಕತ್ತರಿಸಿದ ಮಹಿಳೆಯರ 9 ಶವಗಳು ಪತ್ತೆಯಾಗಿದ್ದವು. ಕೂಡಲೇ ಎಚ್ಚೆತ್ತುಕೊಂಡು ಭಾರಿ ಕಾರ್ಯಾಚರಣೆ ಮಾಡಿದ ಕೀನ್ಯಾ ಪೊಲೀಸರು ಜುಲೈ 16 ರಂದು ಕಾಲಿನ್ಸ್ ಜುಮೈಸಿ ಖಲುಶಾನನ್ನು ಬಂಧಿಸಿದ್ದರು. ಆದರೆ, ವಿಚಾರಣೆ ನಡೆಯುವ ಹಂತದಲ್ಲೇ ಆತ ತಪ್ಪಿಸಿಕೊಂಡದ್ದು, ಆತಂಕಕ್ಕೆ ಕಾರಣವಾಗಿದೆ. ತನ್ನ ಹೆಂಡತಿಯೂ ಸೇರಿದಂತೆ 42 ಮಹಿಳೆಯರನ್ನು ಕೊಂದಿರುವುದಾಗಿ ಖಲುಶಾ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚು ಭದ್ರತೆ ಇರುವ ಜೈಲಿನಿಂದ ಸರಣಿ ಹಂತಕ ಹೇಗೆ ತಪ್ಪಿಸಿಕೊಂಡ ಎಂದು ನ್ಯಾಯಾಧೀಶರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ 9 ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.ಕಾಲಿನ್ಸ್ ಜುಮೈಸಿ ಖಲುಶಾ ಬಂಧನಕ್ಕೆ ಬಲೆ ಬೀಸಲಾಗಿದೆ. ಆತ ಪ್ರೇಮ ವೈಫಲ್ಯ ಅನುಭವಿಸಿದ್ದ. ಅದಕ್ಕಾಗಿ ಆತ ಮಹಿಳೆಯರಿಗೆ ಆಮೀಷ ತೋರಿಸಿ ಅವರನ್ನು ಕೊಲೆ ಮಾಡಿ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಕ್ವಾರಿಗೆ ಎಸೆಯುತ್ತಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ