ಸಿನಿಮೀಯ ರೀತಿಯಲ್ಲಿ ದಟ್ಟ ಕಾಡಿನ ಗುಹೆಯೊಳಗೆ ನಿಧಿಗಾಗಿ ಹುಡುಕಾಟ..! ಅತ್ಯಾಧುನಿಕ ಟೆಕ್ನಾಲಜಿ ಬಳಸಿದ್ದ ನಿಧಿಗಳ್ಳರು ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿದ್ದೇಗೆ..?

ನ್ಯೂಸ್ ನಾಟೌಟ್: ನಿಧಿಗಳ್ಳರು ಗ್ಯಾಂಗ್‌ವೊಂದು ಸಿನಿಮೀಯ ರೀತಿಯಲ್ಲಿ ಐತಿಹಾಸಿಕ ಅರಣ್ಯ ಪ್ರದೇಶದಲ್ಲಿ ನಿಧಿಗಾಗಿ ಶೋಧ ನಡೆಸಿ ಸಿಕ್ಕಿಬಿದ್ದಿದ್ದಾರೆ. ಆಂಧ್ರದ ಕಳ್ಳರು ಬಳ್ಳಾರಿಯ ಸಂಡೂರು ಅರಣ್ಯ ಪ್ರದೇಶದಲ್ಲಿ ಆತ್ಯಾಧುನಿಕ ಟೆಕ್ನಾಲಜಿ ಬಳಸಿ ನಿಧಿ ಶೋಧನೆಗೆ ಮುಂದಾಗಿದ್ದರು ಎನ್ನಲಾಗಿದೆ. ದಟ್ಟ ಕಾಡಿನ ಮಧ್ಯದಲ್ಲಿರುವ ಗುಹೆಗಳಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿ ಮಲೈ ಅರಣ್ಯ ವ್ಯಾಪ್ತಿಯಲ್ಲಿ ಚಿನ್ನ, ವಜ್ರಕ್ಕಾಗಿ ಹುಡುಕಾಡಿದ್ದಾರೆ. ಇದಕ್ಕಾಗಿ ಗುಹೆಯಲ್ಲಿ ಆಕ್ಸಿಜನ್, ಜನರೇಟರ್, ಡಿಗ್ಗಿಗ್ ಮಷೀನ್ ಸೇರಿದಂತೆ ಅತ್ಯಾಧುನಿಕ ಸಾಧನಗಳನ್ನು ಬಳಸಿದ್ದಾರೆ.ಅರಣ್ಯಾಧಿಕಾರಿಗಳು ಆಂಧ್ರದ ಐವರು ನಿಧಿಗಳ್ಳರ ಹೆಡೆಮುರಿ ಕಟ್ಟಿದ್ದಾರೆ. ನೀರು‌ ತರುವಾಗ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳ ಕೈಗೆ ಲಾಕ್ ಆಗಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಎಂಟ್ರಿ ಆಗುತ್ತಿದ್ದಂತೆ ಇನ್ನುಳಿದ 06 ಮಂದಿ ಖದೀಮರು ಪರಾರಿಯಾಗಿದ್ದಾರೆ. ಒಟ್ಟು 11 ಜನರ ತಂಡವು ತಾರಾನಗರದ ನಾರಿಹಳ್ಳದ ಹಿಂಭಾದ ಅರಣ್ಯ ಗುಡ್ಡದಲ್ಲಿ ನಿಧಿಗಾಗಿ ಶೋಧ ನಡೆಸಿದ್ದಾರೆ. ಗುಹೆಗೊಳಗೆ ಸುರಂಗ ಕೊರೆಯಲು ಮುಂದಾಗಿತ್ತು, ಇದಕ್ಕಾಗಿ ತಾತ್ಕಾಲಿಕ ಆಕ್ಸಿಜನ್ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. Click