ಮಾಜಿ ಪತಿ ನಾಗ ಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾಗೆ ಪ್ರಪೋಸ್ ಮಾಡಿದ ಯೂಟ್ಯೂಬರ್..! ಒಪ್ಪಿಗೆ ಇದೆ ಎಂದ ಸಮಂತಾ..! ಮತ್ತೆ ಮದುವೆಯಾಗ್ತಾರಾ ನಟಿ..?

ನ್ಯೂಸ್ ನಾಟೌಟ್ : ನಟಿ ಸಮಂತಾ ರುಥ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದಿದ್ದರು, ಮತ್ತೆ ಒಂದಾಗುತ್ತಾರೆ ಎನ್ನುಷ್ಟರಲ್ಲಿ ನಾಗ ಚೈತನ್ಯ ಮತ್ತೊಬ್ಬ ನಟಿಯನ್ನು ಡೇಟ್ ಮಾಡಲು ಶುರು ಮಾಡಿದ್ದರು. ಕೆಲವು ದಿನಗಳ ಹಿಂದೆ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಸಮಂತಾಗೆ ಮರು ಮದುವೆಯ ಪ್ರಸ್ತಾಪಗಳು ಸಾಲು-ಸಾಲಾಗಿ ಬರುತ್ತಿವೆ ಎನ್ನಲಾಗಿದೆ. ಈ ನಡುವೆ ಅಭಿಮಾನಿಯೊಬ್ಬ ಪ್ರಪೋಸ್ ಮಾಡಿರುವ ವಿಡಿಯೋಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಮೆಂಟ್‌ನ ನೋಡಿದ ಇನ್ನಿತರ ಅಭಿಮಾನಿಗಳು ‘ಹಾಗಿದ್ರೆ ಸಮಂತಾ ಮನಸ್ಸಿನಲ್ಲಿ ಈಗ ಮದುವೆಯ ಯೋಚನೆ ಬಂದಿರಬೇಕು…ಮೊದಲು ಜೋಡಿಯನ್ನು ಹುಡುಕೋಣ’ ಎಂದು ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್ ಆಗಿರುವ ಮುಕೇಶ್ ಉರ್ಫ್‌ ಕೃಷ್ಣ ಎಡಿಟ್ಸ್‌ ತೆಲುಗು ಒಂದು ವಿಡಿಯೋ ಮಾಡಿದ್ದಾರೆ. ನಿನ್ನೊಟ್ಟಿಗೆ ನಾನು ಇದ್ದೀನಿ ಎಂದು ಸಮಂತಾಳಿಗೆ ಹೇಳಬೇಕು ಎಂದು ವಿಡಿಯೋ ಆರಂಭಿಸಿದ್ದಾನೆ. ‘ನೋಡಿ ನಿಮಗೆ ನಾನು ಇದ್ದೀನಿ ನಮ್ಮ ಜೋಡಿ ತುಂಬಾನೇ ಚೆನ್ನಾಗಿದೆ. ನೀವು ಓಕೆ ಅಂದ್ರೆ ನಾನು ಮದುವೆಯಾಗಲು ರೆಡಿಯಾಗಿರುವೆ. ಎರಡು ವರ್ಷ ಟೈಂ ಕೊಡಿ ನಾನು ಚೆನ್ನಾಗಿ ದುಡಿದು ನಿಮ್ಮನ್ನು ನೋಡಿಕೊಳ್ಳುತ್ತೀನಿ’ ಎಂದು ಹೇಳುತ್ತಾ ಕೈಯಲ್ಲಿ ಸಣ್ಣ ಹಾರ್ಟ್ ಹಿಡಿದುಕೊಂಡು ಮಂಡಿಯೂರಿ ಪ್ರಪೋಸ್ ಮಾಡುತ್ತಾನೆ.ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದಂತೆ ಸಮಂತಾರ ಕಣ್ಣಿಗೆ ಬಿದ್ದಿದೆ. ‘ವಿಡಿಯೋದಲ್ಲಿ ಜಿಮ್ ಬ್ಯಾಗ್ರೌಂಡ್ ಇರುವ ಕಾರಣ ನನಗೆ ಸ್ವಲ್ಪ ಒಪ್ಪಿಗೆ ಇದೆ’ ಎಂದು ಸಮಂತಾ ಕಾಮೆಂಟ್ ಮಾಡಿದ್ದಾರೆ.