ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎರಡು ದಿನಗಳ ‘ಸಕ್ಷಮ್’ ಕಾರ್ಯಾಗಾರಕ್ಕೆ ಬುಧವಾರ (ಆ.21) ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಲೀಲಾಧರ ಡಿ.ವಿ. ಚಾಲನೆ ನೀಡಿದರು.
ಬೆಂಗಳೂರು ಫಾರ್ಮಸ್ಯುಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ತರಬೇತುದಾರ ಶ್ರೀಹರಿ ಪಿ. ಗುಪ್ತ ಕಾರ್ಯಾಗಾರದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತ ಎಂ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಕಾಲೇಜಿನ ಕಿರಿಯ ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೆಂಗಳೂರು ಫಾರ್ಮಸಿಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅನುಸಾರ, ಕಾಲೇಜಿನ ಕಿರಿಯ ವೈದ್ಯರು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಂವಹನ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಬೆಂಗಳೂರು ಫಾರ್ಮಸ್ಯುಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಎರಡು ದಿನಗಳ ‘ಸಕ್ಷಮ್’ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಅಪೂರ್ವ ನಿರೂಪಿಸಿದರು. ಡಾ. ಶುಭಶ್ರೀ, ಡಾ. ರೇಣುಕಾ ಮತ್ತು ಡಾ. ತನುಶ್ರೀ ಪ್ರಾರ್ಥಿಸಿದರು. ಹಾಗೂ ಡಾ. ಅನುಷಾ ಮಡಪ್ಪಾಡಿ ಕಾರ್ಯಾಗಾರದ ತರಬೇತುದಾರರನ್ನು ಪರಿಚಯಿಸಿದರು.