- +91 73497 60202
- [email protected]
- November 1, 2024 7:11 PM
ನ್ಯೂಸ್ ನಾಟೌಟ್: ದೇಶದ ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (70th National Film Awards) ಶುಕ್ರವಾರ (ಆ.16) ಘೋಷಿಸಲಾಗಿದೆ. ಇದರಲ್ಲಿ ಕನ್ನಡದ ಚಿತ್ರಗಳೂ ಸ್ಥಾನ ಪಡೆದುಕೊಂಡಿರುವುದು ಗಮನಾರ್ಹ ವಿಷಯ. ದೇಶದಾದ್ಯಂತ ಅತ್ಯುತ್ತಮ ಚಲನಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗೌರವಿಸಲು ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಭಾರತೀಯ ಚಲನಚಿತ್ರ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕನ್ನಡ ಚಿತ್ರ ಕಾಂತಾರ ಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ (Rishab Shetty) ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು ಕಾಂತಾರ ಪಡೆದುಕೊಂಡಿದೆ. ಕನ್ನಡದ ಮತ್ತೊಂದು ರೆಕಾರ್ಡ್ ಬ್ರೇಕಿಂಗ್ ಸಿನಿಮಾ ಕೆಜಿಎಫ್ 2 (KGF-2) ಚಿತ್ರವು ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಕೆಜಿಎಫ್ ಅಧ್ಯಾಯ-2 ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಅದೇ ಚಿತ್ರವು ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನು ಸಹ ಪಡೆದಿದೆ.ಅತ್ಯುತ್ತಮ ಚೊಚ್ಚಲ ನಿರ್ದೇಶನದ ಚಿತ್ರ ಪ್ರಶಸ್ತಿಯನ್ನು ʼಮಧ್ಯಂತರʼ ಎಂಬ ಚಿತ್ರ ಬಾಚಿಕೊಂಡಿದೆ. ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿಯು ಕಾರ್ತಿಕೇಯ-2 ಪಾಲಾಗಿದ್ದರೆ, ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ಪೊನ್ನಿಯನ್ ಸೆಲ್ವನ್ -2 ಚಿತ್ರದ ಪಾಲಾಗಿದೆ. ಶರ್ಮಿಳಾ ಟ್ಯಾಗೋರ್ ಅವರ ಗುಲ್ಮೊಹರ್ ಅತ್ಯುತ್ತಮ ಹಿಂದಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ.ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇಬ್ಬರು ಪಡೆದುಕೊಂಡಿದ್ದಾರೆ. ತಮಿಳು ಚಿತ್ರ ತಿರುಚಿತ್ರಾಂಬಲಂಗಾಗಿ ನಿತ್ಯಾ ಮೆನೆನ್ ಮತ್ತು ಕಚ್ ಎಕ್ಸ್‌ಪ್ರೆಸ್ ಗಾಗಿ ಮಾನಸಿ ಪರೇಖ್ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ