- +91 73497 60202
- [email protected]
- November 22, 2024 11:50 AM
ನ್ಯೂಸ್ ನಾಟೌಟ್: ರಿಯಲ್ ಎಸ್ಟೇಟ್ ಏಜೆಂಟನೊಬ್ಬ, ಇನ್ನೊಬ್ಬ ಏಜೆಂಟ್ ನನ್ನು ಕೊಲ್ಲಲು ಸುಪಾರಿ ನೀಡಿ, ಸುಪಾರಿ ಪಡೆದುಕೊಂಡವರಿಂದ ತಾನೂ ಕೊಲೆಯಾದ ಪ್ರಕರಣ ಮುಂಬೈನಲ್ಲಿ ವರದಿಯಾಗಿದೆ.ಪ್ರಕರಣ ಸಂಬಂಧ ನವೀ ಮುಂಬೈ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇಬ್ಬರು ರಿಯಲ್ ಎಸ್ಟೇಟ್ ಏಜೆಂಟ್‌ಗಳು ನಾಪತ್ತೆಯಾದ ಒಂದು ವಾರದ ನಂತರ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರ ಮೃತದೇಹಗಳು ಮುಂಬೈನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.ಒಬ್ಬ ಏಜೆಂಟ್ ಇನ್ನೊಬ್ಬನನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದನು. ಆದರೆ ಆತನೂ ಪ್ರಕರಣದಲ್ಲಿ ಕೊಲೆಯಾಗಿದ್ದಾನೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧಿಸುತ್ತಿದ್ದಾರೆ. 39 ವರ್ಷದ ಸುಮಿತ್ ಜೈನ್ ಎಂಬಾತ ಅಮೀರ್ ಖಾಂಜಾದಾ ಹತ್ಯೆಗೆ ಸುಪಾರಿ ನೀಡಿದ್ದ. ನಾಪತ್ತೆಯಾದ ನಂತರ ಅವರಿಬ್ಬರ ಮೃತದೇಹಗಳು ನವೀ ಮುಂಬೈನಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ. ಜೈನ್ ನ ಮೃತದೇಹ ಆಗಸ್ಟ್ 23 ರಂದು ಪೆನ್-ಖೋಪೋಲಿ ರಸ್ತೆಯಲ್ಲಿ ಪತ್ತೆಯಾಗಿದ್ದರೆ, ಆಗಸ್ಟ್ 27 ರಂದು ಕರ್ನಾಲಾ ಪಕ್ಷಿಧಾಮದ ಬಳಿ ಖಾನ್ ಝಾದಾನ ಮೃತದೇಹ ಪತ್ತೆಯಾಗಿತ್ತು. ಪಂಕಜ್ ದಹಾನೆ ಎಂಬವರು ರಾಯಘಡದ ಪಾಲಿಯಲ್ಲಿ 3.5 ಎಕರೆ ಭೂಮಿಯನ್ನು 2 ಕೋಟಿ ರೂ.ಗೆ ಖರೀದಿಸಿದ್ದರು. ಜಮೀನಿನ ನಿಜವಾದ ಮಾಲಕರು ಮೃತಪಟ್ಟಿದ್ದರಿಂದ ನೋಂದಣಿಗಾಗಿ ನಕಲಿ ಭೂಮಾಲೀಕರನ್ನು ಜೈನ್ ಹಾಜರುಪಡಿಸಿದ್ದನು. ಜೈನ್ ಈ ಹಿಂದೆಯೂ ಆಸ್ತಿಗಳನ್ನು ಮಾರಾಟ ಮಾಡಲು ನಕಲಿ ಭೂ ಮಾಲೀಕರನ್ನು ಸೃಷ್ಟಿಸಿದ ವಂಚನೆಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಾಡಿಗೆ ಹಂತಕರಲ್ಲಿ ಒಬ್ಬ ಗುಂಡಿಕ್ಕಿ ಖಾನ್ ಝಾದಾ ನನ್ನು ಕೊಲೆ ಮಾಡಿದ್ದಾನೆ. ಬಳಿಕ ಸುಮಿತ್ ಜೈನ್ ಖಾನ್ ಝಾದಾ ನನ್ನು ಕೊಂದ ಅಪಹರಣಕಾರರಿಂದ ತಾನು ತಪ್ಪಿಸಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಲು ತನ್ನ ಕಾಲಿಗೆ ಗುಂಡು ಹಾರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. https://newsnotout.com/2024/08/pavitra-gowda-jail-kannada-news-darshan-thugudeepa-dogs
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ