ರಾಜಸ್ಥಾನಿ ಲೆಹರಿಯಾ ಸಾಂಪ್ರದಾಯಿಕ ಪೇಟ ಧರಿಸಿ ಧ್ವಜಾರೋಹಣ ನೆರವೇರಿಸಿದ ಮೋದಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿದ ಪ್ರಧಾನಿ

ನ್ಯೂಸ್ ನಾಟೌಟ್: ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಇದರ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಳಗ್ಗೆ 7:30 ರ ಸುಮಾರಿಗೆ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಗೆ ಸ್ವಾತಂತ್ರೋತ್ಸವದ ಶುಭಕೋರಿದರು. ಬಳಿಕ ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಮಾತನಾಡಿದ ಮೋದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಈ ವೇಳೆ ಗಮನ ಸೆಳೆದಿದ್ದು ಅವರ ಪೇಟ. ಪ್ರತಿ ವರ್ಷವೂ ವೇಷಭೂಷಣಗಳಿಂದಲೇ ಗಮನ ಸೆಳೆಯುವ ನಮೋ, ಕೆಂಪು ಕೋಟೆಯಲ್ಲಿ ರಾಜಸ್ಥಾನಿ ಲೆಹರಿಯಾ ಪ್ರಿಂಟ್‌ ಪೇಟಾ (Leheriya Print Turban) ಧರಿಸಿ ಗಮನ ಸೆಳೆದರು. ಲೆಹರಿಯಾ, ಜವಳಿ ಟೈಡೈ ವಿನ್ಯಾಸವು ರಾಜಸ್ಥಾನದ ಸಾಂಪ್ರದಾಯಿಕ ವೈಭವಕ್ಕೆ ಮತ್ತೊಂದು ಹೆಸರಾಗಿದೆ. ಥಾರ್‌ ಮರುಭೂಮಿಯಲ್ಲಿ ನೆಲೆಸಿರುವ ಜನರು ಹೆಚ್ಚಾಗಿ ಇದನ್ನು ಧರಿಸುತ್ತಾರೆ. Click