ನ್ಯೂಸ್ ನಾಟೌಟ್: ಭೀಕರ ಭೂಕುಸಿತ, ಜಲಪ್ರಳಯದಿಂದ ಕೇರಳದ ವಯನಾಡ್ ಅಕ್ಷರಶಃ ಇದೀಗ ಸ್ಮಶಾನ ಮೌನವಾಗಿದೆ. ದಿನೇ ದಿನ ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಪ್ರದೇಶಕ್ಕೆ ಇಲ್ಲಿನ ಸಂಸದರಾದ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಆದರೆ ಇವರ ಭೇಟಿಗೆ ಸ್ಥಳೀಯರಿಂದ ಭಾರಿ ಆಕ್ಷೇಪ ಎದ್ದಿದೆ. ನಿಮ್ಮ ಭೇಟಿಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂದು ಸ್ಥಳೀಯರ ವಿರೋಧಪಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಲಪ್ರಳದಿಂದ ಕೊಚ್ಚಿಹೋಗಿರುವ ಸ್ಥಳಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ವಾಹನದಲ್ಲಿ ಕುಳಿತು ಸಂಚರಿಸುತ್ತಿದ್ದ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ರಾಹುಲ್ ಭೇಟಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾನೆ. ವಾಹನದಲ್ಲಿ ಬಂದು ಪರಿಸ್ಥಿತಿ ಅವಲೋಕಿಸುವ ಅವಶ್ಯಕತೆ ಏನಿದೆ? ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಅವರಿಗೆ ನಿಜವಾಗಿ ಕಾಳಜಿ ಇದ್ದರೆ ವಾಹನದಿಂದ ಕೆಳಗಿಳಿಯಲಿ. ಕಾಲಿಗೆ ಮಣ್ಣಾಗುತ್ತದೆ ಎಂಬ ಚಿಂತೆಯೇ ಹಾಗಿದ್ದರೆ ಇಲ್ಲಿಗೆ ಬಂದಿದ್ದೇಕೆ? ಏನನ್ನು ನೋಡಲು ಆತ ಬಂದಿದ್ದಾರೆ ಎಂದು ವ್ಯಕ್ತಿಯೊಬ್ಬ ಕೋಪದಲ್ಲಿ ಕಿರುಚುತ್ತಾ ರಾಹುಲ್ ಇದ್ದ ವಾಹನವನ್ನು ತಡೆಯುವ ಪ್ರಯತ್ನ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.
ಆದರೂ ರಾಹುಲ್ ಗಾಂಧಿಯ ವಾಹನ ಹಾಗೇ ಮುಂದಕ್ಕೆ ಚಲಿಸಿದೆ. ಆಗ ಆವ್ಯಕ್ತಿ ಮತ್ತಷ್ಟು ಕೋಪದಿಂದ ಕೂಗಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು, ಎಲ್ಲರೂ ರಾಹುಲ್ ಗಾಂಧಿಯನ್ನು ಪ್ರವಾಸಿಗ ಎಂದು ವ್ಯಂಗ್ಯವಾಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿ ಪ್ರವಾಹದಲ್ಲಿ ಕುಟುಂಬಸ್ಥರನ್ನು ಆತ್ಮಸ್ಥೈರ್ಯ ತುಂಬಿದ್ದಾರೆ.