ಪ್ರೇಮಲೋಕದ ರವಿಚಂದ್ರನ್ ನ ಹೀರೋಯಿನ್ ದೇಶದ ಅತ್ಯಂತ ಶ್ರೀಮಂತ ನಟಿ..! ಈಕೆಯ ಆಸ್ತಿ ಮೌಲ್ಯ ಬರೋಬ್ಬರಿ 4,600 ಕೋಟಿ ರೂಪಾಯಿ..!

ನ್ಯೂಸ್ ನಾಟೌಟ್: ಹುರೂನ್ ಸಂಸ್ಥೆ(Hurun List) ಇಂಡಿಯಾ ಶ್ರೀಮಂತರ ಪಟ್ಟಿಯ 2024ರ ಆವೃತ್ತಿಯನ್ನು ಗುರುವಾರ(ಆ.29) ಬಿಡುಗಡೆ ಮಾಡಲಾಗಿದೆ. ಇದೊಂದು ವಾರ್ಷಿಕ ಪಟ್ಟಿಯಾಗಿದ್ದು, ಭಾರತದಲ್ಲಿನ ಅತ್ಯಂತ ಶ್ರೀಮಂತ ಜನರ ಹೆಸರುಗಳನ್ನು ಅವರ ಗಳಿಕೆಯ ಆಧಾರದ ಮೇಲೆ ಅವರ ಸಂಪತ್ತಿನ ಅಂದಾಜುಗಳೊಂದಿಗೆ ಸಂಗ್ರಹಿಸುತ್ತದೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಂತಹ ಬಿಲಿಯನೇರ್‌ಗಳು ಬಿಸಿನೆಸ್ ಮ್ಯಾನ್ ವಿಭಾಗದಲ್ಲಿದ್ದಾರೆ. ಹಲವಾರು ಎಂಟರ್‌ಟೇನ್‌ಮೆಂಟ್ ಸೆಲೆಬ್ರಿಟಿಗಳು ಸಹ ಪಟ್ಟಿಯ ಭಾಗವಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಭಾರತದ ಎಂಟರ್‌ಟೇನ್‌ಮೆಂಟ್ ಪ್ರಪಂಚದ ಶ್ರೀಮಂತ ಮಹಿಳೆಯ ಹೆಸರು ವಿಶೇಷವಾಗಿದೆ.ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಮುಂತಾದವರ ಆಸ್ತಿ ಮೌಲ್ಯವನ್ನೆಲ್ಲಾ ಒಟ್ಟುಗೂಡಿಸಿದರೂ ಈಕೆಯ ಶ್ರೀಮಂತಿಕೆಗೆ ಹತ್ತಿರವೂ ಬರುವುದಿಲ್ಲ. ಈಕೆ ನಮ್ಮ ಕನ್ನಡದಲ್ಲಿ ರವಿಚಂದ್ರನ್ ಫಿಲಂನಲ್ಲಿ ನಾಯಕಿಯಾಗಿ ನಟಿಸಿದ್ದವಳು. ಇವಳು ಜೂಹಿ ಚಾವ್ಲಾ. ಇವಳ ಆಸ್ತಿ ಮೌಲ್ಯ 4600 ಕೋಟಿ ರೂ. ಜೂಹಿ ಈಗ ಆರಾಮವಾಗಿ ಭಾರತದ ಶ್ರೀಮಂತ ನಟಿ ಮತ್ತು ವಿಶ್ವದ ಶ್ರೀಮಂತರಲ್ಲಿ ಒಬ್ಬಳು. ಕನ್ನಡದಲ್ಲಿ ರವಿಚಮದ್ರನ್ ಜೊತೆ ಪ್ರೇಮಲೋಕ, ಕಿಂದರಿಜೋಗಿ, ಶಾಂತಿ ಕ್ರಾಂತಿ ಮೊದಲಾದ ಫಿಲಂಗಳಲ್ಲಿ ಹೀರೋಯಿನ್ ಆಗಿದ್ದವಳು. ನಂತರ ಬಾಲಿವುಡ್ ಹಾಗೂ ಸೌತ್ ಇಂಡಿಯಾ ಫಿಲಂ ಇಂಡಸ್ಟ್ರಿಯನ್ನು ಆಳಿದವಳು. 1,000 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿರುವ ಭಾರತೀಯರನ್ನು ಈ ಪಟ್ಟಿಯು ಲಿಸ್ಟ್ ಮಾಡುತ್ತದೆ. ಕಳೆದ ವರ್ಷ 220 ವ್ಯಕ್ತಿಗಳಿದ್ದ ಪಟ್ಟಿ ಈ ವರ್ಷ 1,539 ಜನರಿಗೆ ಬೆಳೆದಿದೆ. ನಟ ಶಾರುಖ್ ಖಾನ್ ಅವರು 7300 ಕೋಟಿ ರೂಪಾಯಿಗಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾನೆ. ಇದು ಭಾರತದ ಯಾವುದೇ ಸೆಲೆಬ್ರಿಟಿಯ ಮೌಲ್ಯಕ್ಕಿಂತ ಅತ್ಯಧಿಕವಾಗಿದೆ. ಅವನ ಬೆನ್ನಿನ ಹಿಂದೆಯೇ ಇರುವವಳು ಜೂಹಿ ಚಾವ್ಲಾ. ಯಾಕೆಂದರೆ ಈಕೆ ಶಾರುಖ್‌ನ ವ್ಯಾಪಾರದಲ್ಲಿ ಪಾಲುದಾರೆ ಮತ್ತು ಮಾಜಿ ಸಹನಟಿ ಕೂಡ ಆಗಿದ್ದಾರೆ.90ರ ದಶಕದಲ್ಲಿ ಹಿಂದಿ ಚಿತ್ರರಂಗದ ಟಾಪ್ ನಟಿಯರಲ್ಲಿ ಜೂಹಿ ಕೂಡ ಒಬ್ಬಳು. Click