ನ್ಯೂಸ್ ನಾಟೌಟ್: ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಆಜಾದ್ ನಗರದ ಮುಖ್ಯ ರಸ್ತೆಯ ಬಳಿ ನಡೆದಿದೆ.
ಕಳೆದ 2 ಮನೆಯ ಯಜಮಾನಿ ಭುವನೇಶ್ವರಿ (40) ಮತ್ತು ಈಕೆಯ ತಮ್ಮ ಮಾರುತಿ (38) ಹಾಗೂ ಮಗ ದರ್ಶನ (22) ಮೂವರು ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಇದು ಈಗ ಬೆಳಕಿಗೆ ಬಂದಿದೆ. ಈಕೆಯ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು ಎನ್ನಲಾಗಿದೆ.
ಭುವನೇಶ್ವರಿ ಹೊಟೇಲ್ ಕೆಲಸ ಮಾಡಿಕೊಂಡಿದ್ದಳು. ಇಡೀ ಕುಟುಂಬದ ಜವಾಬ್ದಾರಿಯು ಮಹಿಳೆಯ ಮೇಲೆ ಇತ್ತು. ಮನೆಯಲ್ಲಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮತ್ತು ಮಗನಿದ್ದ ಎನ್ನಲಾಗಿದೆ. ಈ ಇಬ್ಬರು ದುಡಿಯದೇ ಇರುವುದು ದೊಡ್ಡ ಸಮಸ್ಯೆಯಾಗಿತ್ತು. ಎಷ್ಟೇ ಹೇಳಿದರೂ ಇಬ್ಬರು ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಇದರಿಂದ ರೋಸಿ ಹೋಗಿದ್ದ ತಾಯಿ ಮೊನ್ನೆ(ಆ.11) ರಾತ್ರಿ ಇಬ್ಬರಿಗೂ ಊಟದಲ್ಲಿ ವಿಷ ಕೊಟ್ಟು ಕೊಂದಿದ್ದಾಳೆ ಎಂದು ಹೇಳಲಾಗಿದೆ.
ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆ ಒಳಗೆಯಿಂದ ಲಾಕ್ ಆಗಿತ್ತು. ಅಕ್ಕ-ಪಕ್ಕದವರಿಗೆ ಶವದ ದುರ್ವಾಸನೆ ಬರುವುದಕ್ಕೆ ಶುರುವಾಗಿದೆ. ಬಳಿಕ ಕಿಟಕಿ ಗಾಜು ಒಡೆದು ನೋಡಿದಾಗ ಮೂವರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಮೂವರು ಸಾವು ಕಂಡು ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದ್ದು, ಸಂಬಂಧಿಗಳ ಅಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿಯು ತಿಳಿಯುತ್ತಿದ್ದಂತೆ ಬಡಾವಣೆ ಮತ್ತು ಅಕ್ಕ-ಪಕ್ಕದ ಜನರು ಜಮಾಹಿಸಿದ್ದು, ಜೊತೆಗೆ ದೊಡ್ಡಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಬಡತನದಿಂದ ಬೆಂದು ಹೋಗಿದ್ದ ಮಹಿಳೆಗೆ ಕುಟುಂಬ ನಿರ್ವಹಣೆಯು ದೊಡ್ಡ ಸವಾಲು ಅಗಿತ್ತು. ದಿನೇ ದಿನೇ ಖರ್ಚು ವೆಚ್ಚ ಜಾಸ್ತಿ ಆಗುತ್ತಿತ್ತು. ಒಬ್ಬಳೇ ದುಡಿದು ಇಡೀ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಮಗ ಮತ್ತು ತಮ್ಮನ ನಡತೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದರಿಂದ ಬೇಸತ್ತು ಮಹಿಳೆಯು ಕೊನೆಗೆ ಇಬ್ಬರನ್ನು ಕೊಂದು ತಾನು ಸಾಯುವ ನಿರ್ಧಾರಕ್ಕೆ ಬಂದಿದ್ದಳು. ಊಟದಲ್ಲಿ ವಿಷಬೆರೆಸಿ ಮೊದಲು ಇಬ್ಬರಿಗೆ ಕೊಟ್ಟಿದ್ದಾಳೆ. ಇಬ್ಬರು ಮೃತಪಟ್ಟ ಬಳಿಕ ಇವಳು ಅದೇ ವಿಷದೂಟ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.