- +91 73497 60202
- [email protected]
- November 23, 2024 7:37 AM
ದೋಷಪೂರಿತ ನಂಬರ್ ಪ್ಲೇಟ್ ಇದ್ದ 9,684 ವಾಹನಗಳ ಮೇಲೆ ಕೇಸ್..! 22 ದಿನಗೊಳಗೆ ಪೊಲೀಸರ ಭರ್ಜರಿ ಭೇಟೆ..!
ನ್ಯೂಸ್ ನಾಟೌಟ್ : ಸಿಲಿಕಾನ್ ಸಿಟಿಯ ಸಂಚಾರ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದೋಷಪೂರಿತ ನೋಂದಣಿ ಫಲಕ (ಡಿಫೆಕ್ಟಿವ್ ನಂಬರ್ ಪ್ಲೇಟ್) ಹೊಂದಿರುವ 9,684 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಆಯುಕ್ತ ಅಲೋಕ್ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ದೋಷಪೂರಿತ/ಸಂಖ್ಯೆ ಫಲಕಗಳಿಲ್ಲದೆ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ರಸ್ತೆ ಅಪಘಾತ ಪ್ರಕರಣಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಅಪರಾಧ ಎಸಗಲು ಸಹ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಾನೂನು ಜಾರಿ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ವಾಹನ ಸಂಖ್ಯೆಗಳು ಸಹಾಯಕವಾಗಿವೆ. ಕಾನೂನು ಜಾರಿ ಸಂಸ್ಥೆಗಳು ಸಂಚಾರ ಉಲ್ಲಂಘನೆಗಳನ್ನು ಪತ್ತೆಹಚ್ಚಲು, ಅಪರಾಧಗಳನ್ನು ತಡೆಗಟ್ಟಲು, ಅಪಘಾತಗಳು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಾಹನಗಳನ್ನು ಪತ್ತೆಹಚ್ಚಲು ಸಂಖ್ಯೆಗಳನ್ನು ಬಳಸುತ್ತವೆ. ಇದರ ದುರ್ಬಳಕೆ ತಡೆಯಲು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ