ನ್ಯೂಸ್ ನಾಟೌಟ್: ಅಪಾರ್ಟ್ಮೆಂಟ್ವೊಂದರಲ್ಲಿ ದರೋಡೆ ಮಾಡಲು ಹೋಗಿ ಅಲ್ಲಿದ್ದ ವಿದ್ಯಾರ್ಥಿನಿಯನ್ನು ಭಾರತೀಯ ಮೂಲದ ವ್ಯಕ್ತಿ ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ನೇಪಾಳ ಮೂಲದ 21 ವರ್ಷದ ವಿದ್ಯಾರ್ಥಿನಿ ಹತ್ಯೆಯಾದವಳು ಎಂದು ಗುರುತಿಸಲಾಗಿದೆ. 52 ವರ್ಷದ ಬಾಬಿ ಸಿನ್ಹ್ ಶಾ ಗುಂಡಿಟ್ಟು ಕೊಂದ ವ್ಯಕ್ತಿ ಎನ್ನಲಾಗಿದೆ. ಸೋಮವಾರ ಸಂಜೆ 5:30 ರ ಸುಮಾರಿಗೆ ಸಮುದಾಯ ಕಾಲೇಜು ವಿದ್ಯಾರ್ಥಿನಿ ಮುನಾ ಪಾಂಡೆ ತನ್ನ ಅಪಾರ್ಟ್ಮೆಂಟ್ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾಳೆ ಮತ್ತು ತಡವಾಗಿ ವಿಷಯ ಬೆಳಕಿಗೆ ಬಂದಿದೆ.
ಅಪಾರ್ಟ್ಮೆಂಟ್ನೊಳಗಿನ ಶವದ ಬಗ್ಗೆ ಅನಾಮಧೇಯ ಕರೆ ಬಂದಿತ್ತು. ಆಕೆಯ ಅಪಾರ್ಟ್ಮೆಂಟ್ ಸಂಕೀರ್ಣದ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ. ಕೊಲೆ ಬಳಿಕ ಪರಾರಿಯಾಗಿದ್ದ ಬಾಬಿ ಶಾ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಪಾಂಡೆ 2021 ರಲ್ಲಿ ನೇಪಾಳದಿಂದ ಹೂಸ್ಟನ್ ಸಮುದಾಯ ಕಾಲೇಜಿನಲ್ಲಿ ಅಧ್ಯಯನ ಮಾಡಲು ಬಂದಿದ್ದರು. ಆಕೆಯ ತಾಯಿ ಅವಳೊಂದಿಗೆ ಅಪಾರ್ಟ್ಮೆಂಟ್ನಲ್ಲಿ ಇರಲು ಬರುವವರಿದ್ದರು. ಅಷ್ಟರಲ್ಲಾಗಲೇ ದುರ್ಘಟನೆ ನಡೆದಿದೆ ಎಂದು ಹೂಸ್ಟನ್ನ ನೇಪಾಳಿ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದಾರೆ.
Click