- +91 73497 60202
- [email protected]
- November 22, 2024 1:31 PM
ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕೃತವಾಗಿ ಇಸ್ಲಾಮಾಬಾದ್ ಗೆ ಆಹ್ವಾನಿಸಿದ ಪಾಕಿಸ್ತಾನ..! ಏನಿದು ಸಭೆ..?
ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನವು ಇಸ್ಲಮಾಬಾದ್ (Islamabad) ನಲ್ಲಿ ನಡೆಯಲಿರುವ ಶಾಂಘೈ ಕೋಆಪರೇಶನ್ ಆರ್ಗನೈಸೇಶನ್ (SCO) ಸಭೆಗೆ ಅಧಿಕೃತವಾಗಿ ಆಹ್ವಾನಿಸಿದೆ. ಈ ಸಭೆ ಅಕ್ಟೋಬರ್ ನಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಾಪ್ತಾಹಿಕ ಸುದ್ದಿಗೋಷ್ಟಿಯಲ್ಲಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ , ಮುಂಬರುವ ಇಸ್ಲಾಮಾಬಾದ್ ನ ಸರ್ಕಾರದ ಮುಖ್ಯಸ್ಥರ ಮಂಡಳಿ ಸಭೆಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಶಾಂಘೈ ಸರ್ಕಾರ ಸಂಸ್ಥೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ಎಲ್ಲಾ ಮುಖ್ಯಸ್ಥರನ್ನು ಪಾಕಿಸ್ತಾನ ಆಹ್ವಾನಿಸಿದೆ ಎಂದು ಹೇಳಿದರು. ಅಕ್ಟೋಬರ್ 15-16 ರಂದು ಪಾಕಿಸ್ತಾನವು ಆಯೋಜಿಸುವ ಎಸ್ ಸಿಓ ಸಭೆಗೆ ಇಸ್ಲಾಮಾಬಾದ್ ಈಗಾಗಲೇ ಕೆಲವು ದೃಢೀಕರಣಗಳನ್ನು ಸ್ವೀಕರಿಸಿದೆ ಎಂದು ಬಲೂಚ್ ಹೇಳಿದರು.ಪ್ರಾದೇಶಿಕ ಶೃಂಗಸಭೆಗೆ ಭಾರತದ ಪ್ರಧಾನಿ ಮೋದಿಯನ್ನು ಆಹ್ವಾನಿಸಲಾಗುವುದು ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ ಎರಡು ದಿನಗಳ ನಂತರ ಎಸ್ ಸಿಒ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರಿಗೆ ಪಾಕಿಸ್ತಾನದ ಆಹ್ವಾನದ ಅಧಿಕೃತ ದೃಢೀಕರಣ ಬಂದಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ