ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗವಕಾಶ, ಸಂಬಳ ಎಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಭಾರತೀಯ ರಿಸರ್ವ್ ಬ್ಯಾಂಕ್ ನ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್‌ ನ ಮೈಸೂರಿನ ನೋಟು ಮುದ್ರಣ ಘಟಕದಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕರು, ಭದ್ರತಾ ವ್ಯವಸ್ಥಾಪಕ ಹುದ್ದೆಗಳಿಗಾಗಿ ಆಸಕ್ತ/ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬೇಕಾದ ವಯೋಮಿತಿ, ಅರ್ಜಿ ಶುಲ್ಕ, ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ವಿವರ ಸೇರಿದಂತೆ ವಿವರವಾದ ಮಾಹಿತಿ ನೀಡಲಾಗಿದೆ. ಒಟ್ಟು ಹುದ್ದೆಗಳು- 4 ಸಹಾಯಕ ವ್ಯವಸ್ಥಾಪಕರು- (ಭದ್ರತೆ) 3 ಭದ್ರತಾ ವ್ಯವಸ್ಥಾಪಕ- 1ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಆದ್ಯತೆ ಇರುತ್ತದೆ. ವಯೋಮಿತಿ: 45 ರಿಂದ 52 ವರ್ಷಗಳು. ಸಂಬಳ: ಸಹಾಯಕ ವ್ಯವಸ್ಥಾಪಕರು (ಭದ್ರತೆ) 56,100 ರೂ. ಭದ್ರತಾ ವ್ಯವಸ್ಥಾಪಕರು: 69,700 ರೂ. ಎನ್ನಲಾಗಿದೆ. ಅರ್ಜಿಗಳನ್ನು ಆಫ್​​ಲೈನ್ ಮೂಲಕ ಸಲ್ಲಿಸಬಹುದಾಗಿದೆ.ಅರ್ಜಿ ಶುಲ್ಕ: SC, ST, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳಿಗೆ 300 ರೂ. ಇದ್ದು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕ್ ಪೇ ಆರ್ಡರ್ ಮೂಲಕ ಹಣ ಪಾವತಿಸಬೇಕಾಗಿದೆ. ಇಲಾಖೆ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್​ಲೋಡ್ ಮಾಡಿ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ. ಚೀಫ್ ಜನರಲ್ ಮ್ಯಾನೇಜರ್, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ನಂ. 3 ಮತ್ತು 4, I ಹಂತ, I ಹಂತ, B.T.M. ಲೇಔಟ್, ಬನ್ನೇರುಘಟ್ಟ ರಸ್ತೆ, ಅಂಚೆ ಪೆಟ್ಟಿಗೆ ಸಂಖ್ಯೆ 2924, ಡಿ.ಆರ್. ಕಾಲೇಜು ಪೋಸ್ಟ್​ ಬಾಕ್ಸ್ ನಂ. 2924, ಬೆಂಗಳೂರು – 560 029. ಅರ್ಜಿಗಳನ್ನು ಸೆಪ್ಟೆಂಬರ್ 06 ರೊಳಗೆ ಈ ವಿಳಾಸಕ್ಕೆ ಕಳುಹಿಸಬೇಕು. ಕೆಲವು ಪ್ರದೇಶಗಳಿಗೆ ಸೆಪ್ಟೆಂಬರ್ 13ರವರೆಗೆ ವಿಸ್ತರಿಸಲಾಗಿದೆ.