10 ವರ್ಷಗಳ ಬಳಿಕ ಬಾಂಗ್ಲಾ ಗಡಿಯಲ್ಲಿ ನಾಪತ್ತೆಯಾಗಿದ್ದ ಮಗ ಪತ್ತೆ..! ಗಣಿತ ಶಿಕ್ಷಕ ಮಾನಸಿಕ ಅಸ್ವಸ್ಥನಾಗಿದ್ದೇಗೆ..? ಹಿಂಸಾಚಾರದ ನಡುವೆ ಒಂದು ಮನಕಲಕುವ ಕಥೆ..!

ನ್ಯೂಸ್ ನಾಟೌಟ್: ಬಾಂಗ್ಲಾದೇಶದಲ್ಲಿ ಉದ್ಭವಿಸಿದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಪಶ್ಚಿಮ ಬಂಗಾಳದ ನಾರ್ಥ್ 24-ಪರಗಣಾ ಜಿಲ್ಲೆಯ ಪೆಟ್ರಾಪೋಲ್ ಗಡಿಯ ಬಳಿ ಭಾರತ ಹಾಗೂ ಬಾಂಗ್ಲಾದೇಶದ ಜನ ಜಮಾಯಿಸಿದ್ದರಿಂದ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಈ ಸಂದಿಗ್ಧ ಪರಿಸ್ಥಿತಿ ಒಂದು ವಿಶೇಷ ಘಟನೆ ನಡೆದಿದೆ. ಪೆಟ್ರಾಪೋಲ್ ಬಜಾರ್ ನಲ್ಲಿ ಮರದ ಕೆಳಗೆ ಚಿಂದಿ ಬಟ್ಟೆಯಲ್ಲಿದ್ದ ವ್ಯಕ್ತಿಯೊಬ್ಬ ಕೆಸರು ಮಣ್ಣಿನಲ್ಲಿ ಕೋಲಿನಿಂದ ಬರೆಯುತ್ತಾ ಗಣಿತ ಸಮಸ್ಯೆಗಳನ್ನು ಬಗೆಹರಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತನಿಖೆ ನಡೆಸಿದ ಪೊಲೀಸರು, ಆ ವ್ಯಕ್ತಿ ಉತ್ತರ ಪ್ರದೇಶದ ಗೋರಖ್ಪುರದಿಂದ ಹತ್ತು ವರ್ಷಗಳ ಹಿಂದೆ ನಾಪತ್ತೆಯಗಿದ್ದ ಅಮಿತ್ ಕುಮಾರ್ ಪ್ರಸಾದ್ ಎಂಬ ಗಣಿತ ಶಿಕ್ಷಕ ಎನ್ನುವುದನ್ನು ಪತ್ತೆ ಮಾಡಿದರು. “ಮಗ ಶಾಲೆಯಲ್ಲಿ ಗಣಿತ ಪಾಠ ಮಾಡುವ ಜತೆಗೆ ಅಕ್ಕಪಕ್ಕದ ಗ್ರಾಮಗಳ 250ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಗಣಿತ ಹೇಳಿಕೊಡುತ್ತಿದ್ದ. ಗಣಿತದ ಮೇಲಿನ ಪ್ರೀತಿಯಿಂದ ಯುವಕನಾಗಿದ್ದಾಗಲೇ ಪಾಠ ಮಾಡುತ್ತಿದ್ದ. ಮಾನಸಿಕ ಅಸ್ವಸ್ಥತೆಯಿಂದ ಬಳಿಕ ನಾಪತ್ತೆಯಾದ. ಹಲವು ವರ್ಷಗಳ ಕಾಲ ಹುಡುಕಾಡಿದ್ದು ವಿಫಲವಾಗಿತ್ತು. ಇಷ್ಟು ವರ್ಷ ಜೀವಂತ ಇದ್ದಾನೆ ಎಂದೇ ನಾವು ನಿರೀಕ್ಷಿಸಿರಲಿಲ್ಲ” ಎಂದು ಆತನ ತಂದೆ ಹೇಳಿಕೊಂಡಿದ್ದಾರೆ. ಸೋಮವಾರ ಕುಟುಂಬದ ಜತೆ ಪ್ರಸಾದ್ ನನ್ನು ಸೇರಿಸಲಾಗಿದೆ. ಗೋರಖ್ ಪುರದ ಬರ್ಗೊ ಗ್ರಾಮದಿಂದ ಕೆಲ ಸಂಬಂಧಿಕರ ಜತೆ ಪೆಟ್ರಾಪೋಲ್ ಠಾಣೆಗೆ ಆಗಮಿಸಿದ ತಂದೆ ಗಾಮಾ ಪ್ರಸಾದ್ ಎಂಬವರು, ಹತ್ತು ವರ್ಷಗಳ ಹುಡುಕಾಟಕ್ಕೆ ಕೊನೆಗೂ ನೆಮ್ಮದಿ ಸಿಕ್ಕಿತು ಎಂದಿದ್ದಾರೆ. ನಾಪತ್ತೆಯಾಗುವ ಮುನ್ನ ಪ್ರಸಾದ್ ಸ್ಥಳೀಯ ಶಾಲೆಯಲ್ಲಿ ಹಲವು ವರ್ಷ ಕಾಲ ಗಣಿತ ಬೋಧನೆ ಮಡುತ್ತಿದ್ದರು. ಆತ ಬಾಂಗ್ಲಾ ಗಡಿ ದಾಡಿ ಹೋದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. Click