ನ್ಯೂಸ್ ನಾಟೌಟ್: ಆಗಸ್ಟ್ 16ರಂದು ಅಮೆರಿಕದ ನಾರ್ಥ್ ಕ್ಯಾರೋಲಿನ್ ನಲ್ಲಿ ಅರ್ನೆಸ್ಟೋ ಚಂಡಮಾರುತಕ್ಕೆ ಮೂರು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮನೆ ನಾಶವಾಗಿದೆ. ಮನೆ ಬೀಳುವ 11 ಸೆಕೆಂಡ್ ಅವಧಿಯ ವಿಡಿಯೋ ವೈರಲ್ ಆಗಿದೆ.
1973 ರಲ್ಲಿ ರೊಡಾಂಟೆಯ 23214 ಕಾರ್ಬಿನಾ ಡ್ರೈವ್ನಲ್ಲಿ ಈ ಸುಂದರ ಮನೆಯನ್ನು ನಿರ್ಮಿಸಲಾಗಿತ್ತು. ಭಾರೀ ಅಲೆಗಳಿಗೆ ಸಿಲುಕಿದ ವಿಂಟೇಜ್ ಲುಕ್ ಮನೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದು, ಅಲೆಗಳಲ್ಲಿ ಮನೆ ತೇಲುವಂತೆ ಕಂಡು ಬಂದಿದೆ. ಅಲೆಗಳ ಜೊತೆಯಲ್ಲಿ ಮನೆಯ ಕೆಲ ಭಾಗಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.
ನಾರ್ಥ್ ಕ್ಯಾರೋಲಿನ್ ಔಟರ್ ಬಾಕ್ಸ್ ಬಳಿಯ ಅಂಟ್ಲಾಟಿಕ್ ಸಮುದ್ರ ಕಿನಾರೆಯಲ್ಲಿ ಈ ಮನೆ ನಿರ್ಮಾಣ ಮಾಡಲಾಗಿತ್ತು. ಅಟ್ಲಾಂಟಿಕ್ ಸಮುದ್ರ ತೀರಕ್ಕೆ ಅರ್ನೆಸ್ಟೊ ಚಂಡಮಾರುತ ಅಪ್ಪಳಿಸಿತ್ತು. 1973ರಲ್ಲಿ ನಿರ್ಮಾಣವಾಗಿದ್ದ ಮನೆಯನ್ನು 2018ರಲ್ಲಿ ಓರ್ವ ವ್ಯಕ್ತಿ $339,000 (ಸುಮಾರು ರೂ 3 ಕೋಟಿ) ನೀಡಿ ಖರೀದಿಸಿದ್ದರು. ಇದು ನಾಲ್ಕು ಕೋಣೆ ಹಾಗೂ ಎರಡು ಬಾತ್ರೂಮ್ ಹೊಂದಿತ್ತು. ಕಟ್ಟಡ ಅಪಾಯದ ಸ್ಥಿತಿಯಲ್ಲಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ.
ಈ ವಿಡಿಯೋ 14 ಲಕ್ಷಕ್ಕೂ ಅಧಿಕ ವ್ಯೂವ್ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಬಳಕೆದಾರರು ಸಮುದ್ರದ ಕಿನಾರೆಯಲ್ಲಿ ಅದು ಇಷ್ಟು ಹತ್ತಿರದಲ್ಲಿ ಮನೆ ನಿರ್ಮಾಣ ಮಾಡಿರೋದು ಮೂರ್ಖತನ. ಹಾಗಾಗಿ ಆ ಮನೆ ಬಿದ್ದಿದೆ ಎಂದಿದ್ದಾರೆ.