ನ್ಯೂಸ್ ನಾಟೌಟ್: ಸುಳ್ಯದ ಕುಕ್ಕುಜಡ್ಕ ಪರಿಸರದಲ್ಲಿ ಎರಡು ದಿನಗಳಿಂದ ಅಪರಿಚಿತ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರಂತೆ ತಿರುಗಾಡುತ್ತಿದ್ದವರನ್ನು ಪೊಲೀಸರಿಗೆ ಮಾಹಿತಿ ನೀಡಿ, ಸೂಕ್ತ ವ್ಯವಸ್ಥೆ ಮಾಡಿದ ರಿಕ್ಷಾ ಚಾಲಕರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
(ಆ.8) ನಿನ್ನೆ ರಾತ್ರಿ ಸಂಕೇಶ ಬಸ್ ನಿಲ್ದಾಣದಲ್ಲಿ ಉಳಿದುಕೊಂಡಿದ್ದ ಧರ್ಮರಾಜ್ ಶೆಟ್ಟಿ ಎಂದ 78 ವರ್ಷದ ಈ ವ್ಯಕ್ತಿಯನ್ನು ಬಿ.ಎಂ.ಎಸ್ ಕುಕ್ಕುಜಡ್ಕ ಆಟೋ ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ಪುನೀತ್ ಸಂಕೇಶ ಎಂಬವರು ವಿಚಾರಿಸಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ವಿಚಾರಿಸಿದಾಗ ಆ ವ್ಯಕ್ತಿಯು ಹಸಿವು ಆಗುತ್ತಿದೆ ಏನಾದರೂ ತಿನ್ನಲು ಕೊಡಿ ಎಂದು ಕೇಳಿದ್ದಾರೆ. ಪುನೀತ್ ಆ ವ್ಯಕ್ತಿಗೆ ಊಟದ ವ್ಯವಸ್ಥೆಯನ್ನು ಮಾಡಿ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ.
ಪುನೀತ್ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದಾಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಧರ್ಮರಾಜ್ ಶೆಟ್ಟಿಯ ವಿಳಾಸ ಪತ್ತೆ ಮಾಡಿ, ಮನೆಯವರನ್ನು ಸಂಪರ್ಕಿಸಿ ಮನೆಗೆ ತಲುಪಿಸಿದ್ದಾರೆ. ಈ ವೇಳೆ ಪುನೀತ್ ಸಂಕೇಶ್ ಉಚಿತವಾಗಿ ಆ ವ್ಯಕ್ತಿಯನ್ನು ಗುತ್ತಿಗಾರು ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ, ಈ ಕಾರ್ಯದಲ್ಲಿ ಹಲವು ಸ್ಥಳೀಯರು ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
Click