ನ್ಯೂಸ್ ನಾಟೌಟ್: ಲೈಂಗಿಕ ಬಯಕೆ ಈಡೇರಿಸುವ ನಟಿಯರಿಗೆ ಮಾತ್ರ ಮಲೆಯಾಳಂ ಸಿನಿ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿದೆ ಅನ್ನೋ ನ್ಯಾ. ಹೇಮಾ ಸಮಿತಿ ವರದಿ ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಿನಿಮಾ ಕ್ಷೇತ್ರದ ಲೈಂಗಿಕ ಕಿರುಗಳ ಪಟ್ಟಿಯನ್ನೇ ಈ ವರದಿಯಲ್ಲಿ ನೀಡಲಾಗಿದೆ. ಆದರೆ ಕೇರಳ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋ ಆರೋಪವೂ ಕೇಳಿಬರುತ್ತಿದೆ. ಇದೀಗ ಕೇರಳ ಸಿನಿಮಾ ಕಲಾವಿಧರ ಸಂಘಟನೆಯಾಗಿರುವ ಅಮ್ಮಾ(AMMA) ಅಧ್ಯಕ್ಷ ಸ್ಥಾನಕ್ಕೆ ಖ್ಯಾತ ನಟ ಮೋಹನ್ಲಾಲ್ ರಾಜೀನಾಮೆ ನೀಡಿದ್ದಾರೆ.
ಕೇರಳ ಸಿನಿಮಾ ಕ್ಷೇತ್ರದಲ್ಲಿನ ಲೈಂಗಿಕ ಕಿರುಕುಳ ತಡೆಯಲು ಅಮ್ಮಾ ಸಂಘಟನೆ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋ ಗಂಭೀರ ಆರೋಪವೂ ಕೇಳಿಬಂದಿದೆ. ಇದರ ಬೆನ್ನಲ್ಲೇ ಅಮ್ಮಾ ಸಂಘಟನೆ ಅಧ್ಯಕ್ಷ ಸ್ಥಾನದಿಂದ ಮೋಹನ್ಲಾಲ್ ರಾಜೀನಾಮೆ ನೀಡಿದ್ದಾರೆ. ಮೋಹನ್ಲಾಲ್ ರಾಜೀನಾಮೆ ಬೆನ್ನಲ್ಲೇ ಇತರ 17 ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಕೆಲ ಕಲಾವಿಧರು ಸಂಘಟನೆ ವಿರುದ್ಧ ಆರೋಪ ಮಾಡಿದ್ದಾರೆ. ನೈತಿಕ ಮೌಲ್ಯ ಎತ್ತಿ ಹಿಡಿಯುವ ಸಲುವಾಗಿ ಅಮ್ಮಾ ಸಂಘಟನೆ ಎಲ್ಲಾ ಪದಾಧಿಕಾರಿಗಳನ್ನು ಸ್ಥಾನದಿಂದ ಮುಕ್ತಿಗೊಳಿಸಲಾಗಿದೆ ಎಂದಿದೆ. 2 ತಿಂಗಳ ಒಳಗೆ ಚುನಾವಣೆ ನಡೆಯಲಿದೆ. ಹೊಸ ಪದಾಧಿಕಾರಿಗಳ ಆಯ್ಕೆ ಬಳಿಕ ಈ ಸಮಿತಿ ಆರೋಪಗಳು, ಕ್ರಮಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದಿದೆ. ಹೊಸ ಚುನಾಯಿತರ ತಂಡ, ಕೇರಳ ಕಲಾವಿಧರ ಯೋಗಕ್ಷೇಮ, ಸುರಕ್ಷತೆ ಕುರಿತು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಲಿದೆ ಎಂದಿದೆ.
ಇತ್ತ ಪಿಣರಾಯಿ ವಿಜಯನ್ ಸರ್ಕಾರ, ಹೇಮಾ ಸಮಿತಿ ವರದಿಯನ್ನು ನಿರ್ಲಕ್ಷಿಸಿದೆ ಅನ್ನೋ ಆರೋಪ ಕೇಳಿಬಂದಿದೆ. ವರದಿಯಲ್ಲಿ ಹಲವರ ಹೆಸರಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ.
Click