ನ್ಯೂಸ್ ನಾಟೌಟ್: ಫುಟ್ಬಾಲ್ ಪಂದ್ಯಾಟದಲ್ಲಿ ಕಳಪೆ ಪ್ರದರ್ಶನ ನೀಡಿ ಸೋತ ಸಿಟ್ಟಿಗೆ ದೈಹಿಕ ಶಿಕ್ಷಕರೊಬ್ಬರು ಫುಟ್ಬಾಲ್ ಆಟಗಾರರನ್ನು ಮನಬಂದಂತೆ ಥಳಿಸಿರುವ ಅಮಾನುಷ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಸೇಲಂ ಜಿಲ್ಲೆಯ ಮೆಟ್ಟೂರು ನಗರದ ಬಳಿಯ ಶಾಲೆಯದ್ದು ಎನ್ನಲಾಗಿದ್ದು. ದೈಹಿಕ ಶಿಕ್ಷಕರ ಹೆಸರು ಅಣ್ಣಾಮಲೈ ಎಂದು ಹೇಳಲಾಗಿದ್ದು ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳ ಪ್ರದರ್ಶನ ಶಿಕ್ಷಕರಿಗೆ ಇಷ್ಟವಾಗಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ಶಿಕ್ಷಕರು ವಿದ್ಯಾರ್ಥಿಗಳ ಕೂದಲು ಎಳೆದಾಡಿ, ಕಪಾಳಕ್ಕೆ ಹೊಡೆದು, ಒದ್ದು ಹಿಂಸೆ ನೀಡಿದ್ದಾರೆ. ಸದ್ಯ ಶಿಕ್ಷಕನ ಕ್ರೌರ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದಂತೆ ಎಚ್ಚೆತ್ತ ಜಿಲ್ಲಾ ಶಿಕ್ಷಣಾಧಿಕಾರಿ ಶಿಕ್ಷಕನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದು ಅಲ್ಲದೆ ಘಟನೆ ಬಗ್ಗೆ ತನಿಖೆ ನಡೆಸಲು ತಂಡ ರಚಿಸಿದೆ ಎನ್ನಲಾಗಿದೆ.