ನ್ಯೂಸ್ ನಾಟೌಟ್: ಇಂಡೋನೇಷ್ಯಾದಲ್ಲಿ 90 ಶೇಕಡಾ ಮುಸಲ್ಮಾನರಿದ್ದಾರೆ. ಹಿಂದೂಗಳು ಶೇಕಡಾ 20 ರಷ್ಟಿದ್ದಾರೆ. ಅಲ್ಲಿ 11 ಸಾವಿರ ಹಿಂದೂ ದೇವಾಲಯಗಳಿವೆ ಅಲ್ಲಿ ಯಾವುದೇ ಗಲಭೆ ಆಗಿದ್ದನ್ನು ನಾನು ಇದುವರೆಗೆ ಕೇಳಿಲ್ಲ. ಏಕೆಂದರೆ ಅಲ್ಲಿ ಆರ್ಎಸ್ಎಸ್ ಇಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ ಎನ್ನಲಾಗಿದೆ.
ಈ ವಿಚಾರ ಈಗ ಪ್ರಕಾಶ್ ರೈಯವರ ಗಮನಕ್ಕೆ ಬಂದಿದ್ದು, ಮೆಗಾ ಅಪ್ಡೇಟ್ಸ್ ಪೇಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ಪೋಸ್ಟನ್ನು ಶೇರ್ ಮಾಡಿಕೊಂಡಿರುವ ಪ್ರಕಾಶ್ ರೈಯವರು, ಇದು ನನ್ನ ಹೇಳಿಕೆ ಅಲ್ಲ, ಇದು ನೀವೇ (ಮೆಗಾ ಅಪ್ಡೇಟ್ಸ್) ಆಗಿದ್ದಾರೆ ನಿಮ್ಮ ಸ್ವಂತ ಹೇಳಿಕೆ ಎಂದು ಹಾಕಿಕೊಳ್ಳಿ. ಅಥವಾ ಯಾರು ಈ ರೀತಿ ಹೇಳಿಕೆ ನೀಡಿದ್ದಾರೋ ಅವರ ಹೆಸರು ಹಾಕಿಕೊಳ್ಳಿ ಇದು ನನ್ನ ಹೇಳಿಕೆ ಅಲ್ಲ, ನಿಮ್ಮ ಹೇಳಿಕೆಯನ್ನು ನಮ್ಮ ಹೆಸರಿನಲ್ಲಿ ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಗ್ಲ ಮಾಧ್ಯಮವೊಂದರ ಜೊತೆ ಮಾತನಾಡಿದ ಪ್ರಕಾಶ್ ರೈ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಟ್ವಿಟ್ಟರ್ ಪೇಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ತನ್ನ ವಿರುದ್ಧ ಈ ರೀತಿಯ ಅಪಪ್ರಚಾರದ ಬಗ್ಗೆ ಟ್ವಿಟ್ಟರ್ಗೂ ಈ ಪೇಜ್ ವಿರುದ್ಧ ದೂರು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನ ವಕೀಲರನ್ನು ಸಂಪರ್ಕಿಸುತ್ತಿದ್ದೇನೆ ಮತ್ತು ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ. ಇದು ಸಾಮಾನ್ಯ ತಂತ್ರವಾಗಿದೆ. ಬಲಪಂಥೀಯರು ಇಂತಹ ಹೇಳಿಕೆಗಳನ್ನು ನಿರ್ಮಿಸುತ್ತಾರೆ ಮತ್ತು ತಮ್ಮ ಸುಳ್ಳುಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ ಎಂದಿದ್ದಾರೆ.
ನಾನೊಬ್ಬ ಹಿಂದೂ ವಿರೋಧಿ ಎಂಬುದನ್ನು ಬಿಂಬಿಸುವುದಕ್ಕೆ ಈ ಪೋಸ್ಟ್ ಮೂಲಕ ಪ್ರಯತ್ನಿಸಲಾಗಿದೆ. ನಾನು ಬಿಜೆಪಿ ವಿರೋಧಿ ಹಿಂದೂಗಳ ವಿರೋಧಿ, ಮೋದಿ ವಿರೋಧಿ, ಅಮಿತ್ ಶಾ ವಿರೋಧಿ ಎಂದು ಬಿಂಬಿಸಲು ಯಾರೋ ಮುಂದಾಗಿದ್ದಾರೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
Click