ಭಾರತ ಮೂಲದ ವ್ಯಕ್ತಿ ಆ್ಯಪಲ್ ಸಿ.ಎಫ್.​ಒ ಆಗಿ ನೇಮಕ, ಯಾರಿವರು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್​ಫೋನ್ ಕಂಪನಿಯಾದ ಆ್ಯಪಲ್​ಗೆ ಚೀಫ್ ಫೈನಾನ್ಷಿಯಲ್ ಆಫೀಸರ್ Chief Financial Officer (CFO) ಆಗಿ ಭಾರತ ಮೂಲದ ಕೇವನ್ ಪರೇಖ್ ನೇಮಕವಾಗಿದ್ದಾರೆ. ಈ ಹಿಂದಿನ ಲ್ಯೂಕಾ ಮೇಸ್ಟ್ರಿ ಅವರ ಸ್ಥಾನವನ್ನು ಪರೇಖ್ ತುಂಬಲಿದ್ದಾರೆ. ಲೂಕಾ ಸಿಎಫ್​ಒ ಸ್ಥಾನದಿಂದ ಹೊರಹೋಗುತ್ತಾರಾದರೂ ಆ್ಯಪಲ್ ಕಂಪನಿಯಲ್ಲಿ ಅವರು ಬೇರೆ ಜವಾಬ್ದಾರಿಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಜಾಗತಿಕವಾಗಿ ಆ್ಯಪಲ್​ನ ಐಫೋನ್ ಮತ್ತಿತರ ಉತ್ಪನ್ನಗಳ ಮಾರಾಟ ಕಡಿಮೆಗೊಂಡಿರುವ ಈ ಸಂದರ್ಭದಲ್ಲಿ ಸಂಸ್ಥೆಯ ಉನ್ನತ ಸ್ತರದಲ್ಲಿ ನಾಯಕತ್ವ ಬದಲಾವಣೆ ಆಗಿರುವುದು ಗಮನಾರ್ಹ. ಕೇವನ್ ಪರೇಖ್ 10ಕ್ಕೂ ಹೆಚ್ಚು ವರ್ಷಗಳಿಂದ ಆ್ಯಪಲ್ ಕಂಪನಿಯಲ್ಲೇ ಕೆಲಸ ಮಾಡಿದ್ದಾರೆ. ಆ್ಯಪಲ್ ಸೇರುವ ಮುನ್ನ ಅವರು ಥಾಮ್ಸನ್ ರಾಯ್ಟರ್ಸ್ ಮತ್ತು ಜನರಲ್ ಮೋಟಾರ್ಸ್ ಸಂಸ್ಥೆಗಳಲ್ಲಿ ಹಿರಿಯ ಹುದ್ದೆ ನಿಭಾಯಿಸಿದ್ದರು. ಸದ್ಯ ಅವರು ಆ್ಯಪಲ್ ಕಂಪನಿ ಫೈನಾನ್ಷಿಯಲ್ ಪ್ಲಾನಿಂಗ್ ಅಂಡ್ ಅನಾಲಿಸಿಸ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಅವರನ್ನು ಸಿಎಫ್​ಒ ಆಗಿ ನೇಮಕ ಮಾಡುವುದು ಕೆಲ ಕಾಲದ ಹಿಂದೆಯೇ ನಿಶ್ಚಿತವಾಗಿತ್ತು ಎಂದೂ ಹೇಳಲಾಗುತ್ತಿದೆ. ಪ್ರಸಕ್ತ ಸಿಎಫ್​ಒ ಆಗಿರುವ ಲೂಕಾ ಮೇಸ್ಟ್ರಿ ಅವರು 2024ರ ಡಿಸೆಂಬರ್ 31ರವರೆಗೂ ಅದೇ ಸ್ಥಾನದಲ್ಲಿ ಮುಂದುವರಿದು ಆ ಬಳಿಕ ಹುದ್ದೆಯನ್ನು ಕೇವನ್ ಪರೇಖ್ ಅವರಿಗೆ ಬಿಟ್ಟು ಕೊಡಲಿದ್ದಾರೆ. Click