ನ್ಯೂಸ್ ನಾಟೌಟ್: ಗವಿಸಿದ್ಧ ಮಠದ ವಸತಿ ನಿಲಯದಲ್ಲಿ ಸಾವಿರಾರು ಮಕ್ಕಳು ವಾಸವಾಗಿದ್ದಾರೆ. ಈ ಮಕ್ಕಳಿಗೆ ಶ್ರೀ ಮಠ ಉಚಿತವಾಗಿ ಶಿಕ್ಷಣ ಮತ್ತು ದಾಸೋಹ ವ್ಯವಸ್ಥೆ ಮಾಡಿದೆ. ರವಿವಾರ ಸಾಯಂಕಾಲ ಮಠದ ವಸತಿ ನಿಲಯದ ಐದು ಸಾವಿರ ಮಕ್ಕಳಿಗೆ ಮಠದಲ್ಲೇ ತಯಾರಿಸಿ ಪಾನಿಪುರಿ ನೀಡಲಾಯಿತು.
ಅಭಿನವ ಗವಿಸಿದ್ದೇಶ್ವರ ಶ್ರೀಗಳು ಸ್ವತಃ ಮಕ್ಕಳಿಗೆ ಪಾನಿಪುರಿ ಬಡಿಸಿದ್ದಾರೆ. ಕೊಪ್ಪಳದ ಗವಿಮಠ ರಾಜ್ಯದ ಸುಪ್ರಸಿದ್ದ ಮಠಗಳ ಸಾಲಿನಲ್ಲಿದ್ದು, ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Abhinava Gavisiddeswara Swamiji), ಶಿಕ್ಷಣ ದಾಸೋಹ, ಅನ್ನ ದಾಸೋಹ ಸೇರಿದಂತೆ ಜನರ ಬಾಳಿಗೆ ಬೆಳಕಾಗುವ, ಅವರ ಸಮಸ್ಯೆಗಳಿಗೆ ಪರಿಹಾರಾತ್ಮಕ ಕೆಲಸಗಳ ಮೂಲಕ ಪ್ರಸಿದ್ದಿಯನ್ನು ಪಡೆದಿದ್ದಾರೆ.
ಶ್ರೀ ಮಠದಲ್ಲಿ ನಡೆಯುವ ಜಾತ್ರಾಮಹೋತ್ಸವ ದಕ್ಷಿಣ ಭಾರತದ ಕುಂಭಮೇಳವೇಂದೆ ಖ್ಯಾತಿ ಗಳಿಸಿದೆ. ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ, ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯೂ ಭಕ್ತರಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಮಕ್ಕಳಿಗೆ ಶುಚಿ -ರುಚಿಯಾಗಿ ಅಲ್ಲೇ ಪಾನಿಪುರಿ ತಯಾರಿಸಿ ನೀಡಿದ್ದು ವಿಶೇಷವಾಗಿತ್ತು.
Click
https://newsnotout.com/2024/08/wayanad-kannada-news-first-person-who-called-emergency-call-about-incident/ https://newsnotout.com/2024/08/pilgrims-kannada-news-current-shock-kannada-news-police-investigation/