ಫೈನಲ್ ನಲ್ಲಿ ಅನರ್ಹಗೊಂಡ ವಿನೇಶ್‌ ಫೋಗಟ್‌ ಗೆ 4 ಕೋಟಿ ರೂ. ಬಹುಮಾನ..! ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಸಿದ್ಧತೆ..?

ನ್ಯೂಸ್ ನಾಟೌಟ್: ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024) ಫೈನಲ್‌ ಪಂದ್ಯಕ್ಕೂ ಮುನ್ನವೇ ಅನರ್ಹಗೊಂಡು ಕುಸ್ತಿಗೆ ವಿದಾಯ ಹೇಳಿದ ವಿನೇಶ್‌ ಫೋಗಟ್‌ ಅವರಿಗೆ ಹರಿಯಾಣ ಸರ್ಕಾರ 4 ಕೋಟಿ ರೂ. ಬಹುಮಾನ ಘೋಷಿಸಿದೆ. ಇದರೊಂದಿಗೆ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ (Olympic Silver Medalist) ಮಾದರಿಯಲ್ಲೇ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. (Vinesh Phogat) ಈ ಕುರಿತು ಎಕ್ಸ್‌ ಖಾತೆಯಲ್ಲಿ ಹರಿಯಾಣ ಸಿಎಂ ನಯಾಬ್‌ ಸಿಂಗ್‌ ಸೈನಿ (Nayab Singh Saini) ಮಾಹಿತಿ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್‌ ಫ್ರೀಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಫೈನಲ್‌ ತಲುಪಿ ಇತಿಹಾಸ ನಿರ್ಮಿಸಿದ ವಿನೇಶ್‌ ಫೋಗಟ್‌ ಅವರನ್ನು ತವರಿನಲ್ಲಿ ಬೆಳ್ಳಿ ಪದಕ ವಿಜೇತರಾಗಿ ಗೌರವಿಸಲಾಗುವುದು ಎಂದು ಬರೆದುಕೊಂಡಿದ್ದಾರೆ. ಹರಿಯಾಣದ ಧೈರ್ಯಶಾಲಿ ಮಗಳು ವಿನೇಶ್ ಫೋಗಟ್ ಒಲಿಂಪಿಕ್ಸ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ತಲುಪಿದ್ದರು. ಆದ್ರೆ ಅಧಿಕ ತೂಕದ ಕಾರಣ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಅವರು ನಮಗೆಲ್ಲ ಚಾಂಪಿಯನ್ ಆಗಿದ್ದಾರೆ. ಹಾಗಾಗಿ ಪದಕ ವಿಜೇತರಂತೆಯೇ ವಿನೇಶ್‌ರನ್ನ ಗೌರವಿಸುವ ನಿರ್ಧಾರವನ್ನ ನಮ್ಮ ಸರ್ಕಾರ ತೆಗೆದುಕೊಂಡಿದೆ. ಬೆಳ್ಳಿ ಪದಕ ವಿಜೇತರಿಗೆ ಸಮಾನವಾಗಿ ಗೌರವಿಸುತ್ತದೆ, ಜೊತೆಗೆ ಬೆಳ್ಳಿ ಪದಕ ವಿಜೇತರಿಗೆ ಸರ್ಕಾರ ನೀಡುವ ಪ್ರಶಸ್ತಿ ಮತ್ತು ಸೌಲಭ್ಯಗಳನ್ನೂ ಫೋಗಟ್ ಅವರಿಗೆ ಕೃತಜ್ಞತೆಯಿಂದ ನೀಡಲಾಗುತ್ತದೆ. ವಿನೇಶ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. Click