ನ್ಯೂಸ್ ನಾಟೌಟ್ : ದೇಶದ ದೈತ್ಯ ಉದ್ಯಮ ಸಮೂಹ ರಿಲಾಯನ್ಸ್ ಬರೋಬ್ಬರಿ 42,000 ನೌಕರರನ್ನು ಉದ್ಯೋಗದಿಂದ ತೆಗೆದುಹಾಕಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಶಾರ್ಕ್ ಟ್ಯಾಂಕ್ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಉದ್ಯಮಿ ಅನುಪಮ್ ಮಿತ್ತಲ್ ಅವರು ಈ ವರದಿಯನ್ನು ಉಲ್ಲೇಖಿಸುತ್ತ ಎಕ್ಸ್ ತಾಣದಲ್ಲಿ ತಮ್ಮ ಆತಂಕ ಹೊರಹಾಕಿದ್ದರು. “ಭಾರತವು ವಾರ್ಷಿಕವಾಗಿ 80 ಲಕ್ಷದಿಂದ 1 ಕೋಟಿವರೆಗೆ ಉದ್ಯೋಗ ಸೃಷ್ಟಿ ಮಾಡಬೇಕಿರುವ ಅಗತ್ಯವಿರುವಾಗ, ರಿಲಾಯನ್ಸ್ ಥರದ ಪ್ರಮುಖ ಕಂಪನಿಯಿಂದ ಹೊರಬೀಳುತ್ತಿರುವ ಸುದ್ದಿ ಪರಿಸ್ಥಿತಿ ಹದಗೆಡುತ್ತಿರುವುದನ್ನು ಸೂಚಿಸುವಂತಿದೆ” ಎಂಬುದವರ ಅಭಿಪ್ರಾಯವಾಗಿತ್ತು.
ಭಾರತದ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ಸಾರುತ್ತಿದೆ ಎಂದು ಕೆಲವರು ಹೇಳಿದರೆ, ಸಂಪತ್ತು ಏಕವ್ಯಕ್ತಿಯಲ್ಲಿ ಕೇಂದ್ರೀಕೃತವಾದಾಗ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಮುಕೇಶ್ ಅಂಬಾನಿ ವಿರುದ್ಧ ಹಲವರು ಸಾಮಾಜಿಕ ಅಭಿವ್ಯಕ್ತಿಯ ತಾಣಗಳಲ್ಲಿ ಸಿಟ್ಟು ತೋರಿದರು. ಕಾರ್ಪೋರೇಟ್ ಕಂಪನಿಯೊಂದು ದೇಶದ ಮುಂಚೂಣಿ ಯೋಜನೆ-ವ್ಯವಹಾರಗಳಲ್ಲೆಲ್ಲ ತನ್ನ ಏಕಸ್ವಾಮ್ಯ ಸ್ಥಾಪಿಸಿಕೊಂಡಿದೆ ಎಂದಾದಾಗ ಅದು ಉದ್ಯೋಗಸೃಷ್ಟಿಯ ಮೂಲಕ ಆ ಸಂಪತ್ತಿನ ಹಂಚಿಕೆಗೂ ಕಾರಣವಾಗಬೇಕಲ್ಲದೇ ಬೆರಳೆಣಿಕೆ ಮಂದಿಯನ್ನಷ್ಟೇ ಶ್ರೀಮಂತರನ್ನಾಗಿಸುವುದಲ್ಲ ಎಂಬ ಚರ್ಚೆ ಜೋರಾಗಿದೆ.
Click