ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ವಿಪರೀತ ಮಟ್ಟಕ್ಕೆ ಬಂದು ತಲುಪಿ ಬಿಟ್ಟಿದೆ.
ಚಲಿಸುತ್ತಿದ್ದ KSRTC ಬಸ್ ವೊಂದನ್ನ ಅಡ್ಡಗಟ್ಟಿದ ಕಾಡಾನೆ ಬಸ್ ಗೆ ಡಿಚ್ಚಿ ಹೊಡೆದಿದೆ. ಪರಿಣಾಮ ಬಸ್ ಮುಂಭಾಗಕ್ಕೆ ಹಾನಿಯಾಗಿದೆ.
ಈ ಘಟನೆ ಧರ್ಮಸ್ಥಳ -ನಿಡ್ಲೆ ಮಾರ್ಗದ ಬೋಳಿಯಾರ್ ಬಸ್ ಸ್ಟ್ಯಾಂಡ್ ಬದಿಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿದ್ದ ಹಾಗೂ ಸ್ಕೂಟಿಯಲ್ಲಿದ್ದ ಸವಾರರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಕಳೆದ ಎರಡು ದಿನಗಳಿಂದ ಬೊಳಿಯಾರ್ ಹಾಗೂ ಮುಖಿಕಾರ್ ಸುತ್ತಮುತ್ತ ಕಾಡಾನೆಗಳು ಕೃಷಿಕರ ತೋಟಕ್ಕೆ ನುಗ್ಗಿ ಹಾನಿಗೊಳಿಸಿವೆ ಎಂದು ವರದಿಯಾಗಿದೆ. ಸದ್ಯ ಈ ಘಟನೆಯಿಂದ ಇದೀಗ ಸುತ್ತಲಿನ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣಗೊಂಡಿದೆ ಎಂದು ತಿಳಿದು ಬಂದಿದೆ.