ನ್ಯೂಸ್ ನಾಟೌಟ್: ಜೈಲಿನಲ್ಲಿರುವ ದರ್ಶನ್ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಸಿಗರೇಟ್ ಎಳೆಯುತ್ತಾ, ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಷ್ಟು ನ್ಯಾಯಾಂಗ ಬಂಧನದ ಸುತ್ತ ಸದ್ದು ಮಾಡುತ್ತಿದ್ದ ಪ್ರಕರಣ ಈಗ ಮತ್ತೊಮ್ಮೆ ದರ್ಶನ್ ಸುತ್ತಲ್ಲೇ ಸುತ್ತುತ್ತಿದೆ.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ದರ್ಶನ್ ವಿಚಾರದ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, ನಾನು ಒಳಗೆ ಹೋಗಿ ಅವರನ್ನ ಹೊರಗೆ ಕಳಿಸಬೇಕಾ ಎಂದು ಮರು ಪ್ರಶ್ನಿಸಿದ್ದಾರೆ.
ನಾನು ಏನನ್ನು ಹೇಳಬೇಕೋ ಅದನ್ನು ಬಹಳ ಹಿಂದೆಯೇ ಹೇಳಿ ಆಗಿದೆ. ಅದನ್ನೇ ಮತ್ತೆ ಕೆದಕಿಕೊಂಡು ಮಾತನಾಡೋದಕ್ಕೆ ಇಷ್ಟಪಡಲ್ಲ. ನಾನು ಯಾರ ಮನಸ್ಸನ್ನು ನೋಯಿಸಲು ಇಷ್ಟಪಡಲ್ಲ. ಅವರಿಗೆ ಅಂಥ ಒಂದಷ್ಟು ಫ್ಯಾನ್ಸ್ ಊರೆಲ್ಲ ಇದ್ದಾರೆ. ಅವರಿಗೂ ಅಂಥ ಒಂದು ಕುಟುಂಬವಿದೆ. ನಾವು ಮಾತನಾಡುವುದರಿಂದ ಅವರಿಗೂ ನೋವಾಗೋದು ಬೇಡ. ಮಾತನಾಡಿ ಅವರ ಕುಟುಂಬಕ್ಕೂ ನೋವು ಕೊಡಲು ನಾನು ಇಷ್ಟಪಡಲ್ಲ. ನಾನು ಇದನ್ನು ರಾಜಕೀಯವಾಗಿ ಮಾತನಾಡುತ್ತಿದ್ದೇನೆ ಎಂದು ಅಂದುಕೊಳ್ಳಬೇಡಿ ಎಂದು ಹೇಳಿದ್ದಾರೆ. ನಮಗೆ ನಮ್ಮ ನೆಲದ ಕಾನೂನಿನ ಮೇಲೆ ನಂಬಿಕೆಯಿದೆ.
ಅವರು ಡಿಫ್ರೆಂಟ್ ಪರ್ಸನ್ , ನನ್ನ ಆಸಕ್ತಿ, ಅಭಿರುಚಿ ಬೇರೆ. ನನಗೆ ನಾಟಕೀಯವಾಗಿ ಇರಲು ಬರುವುದಿಲ್ಲ. ಸಮಾಜ ಯಾರೋ ಏನೋ ಹೇಳುತ್ತಾರೆ ನಾನು ಮಾಡೋದಕ್ಕೆ ಇಷ್ಟಪಡಲ್ಲ. ಮನಸ್ಸಿನಿಂದ ಬಂದರೆ ನೀವು ಯಾರು ಏನೂ ಹೇಳಿದರೂ ನಾನು ಹೋಗೇ ಹೋಗ್ತೀನಿ ಎಂದಿದ್ದಾರೆ.
ಸದ್ಯ ಕಿಚ್ಚ ಅವರ ಮ್ಯಾಕ್ಸ್ ಸಿನಿಮಾದ ವಿಚಾರ ಟ್ರೆಂಡ್ ನಲ್ಲಿದೆ ಅವರ ಹುಟ್ಟುಹಬ್ಬದ ದಿನ ಬಿಗ್ ಅಪ್ಡೇಟ್ ಹೊರಬೀಳುವ ಸಾಧ್ಯತೆಯಿದೆ.
Click