ನ್ಯೂಸ್ ನಾಟೌಟ್: ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಅಧ್ಯಯನದ ವರದಿಯೊಂದು ಕರ್ನಾಟಕದ ಕರಾವಳಿ ನಗರಗಳು ಹಾಗೂ ಸಮುದ್ರ ಭಾಗದ ಪ್ರದೇಶಗಳು ಮುಳುಗುವ ಎಚ್ಚರಿಕೆಯನ್ನು ನೀಡಿದೆ. ಇದರಲ್ಲಿ ಮಂಗಳೂರು ಮತ್ತು ಉಡುಪಿಯೂ ಸೇರಿದೆ.
ಇತ್ತೀಚೆಗೆ ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಹೊಸ ಸಂಶೋಧನೆಯೊಂದನ್ನು ಮಾಡಿದೆ. ಅವರ ವರದಿ ಪ್ರಕಾರ, ಕಾಲ ಕಳೆದಂತೆ ಸಮುದ್ರ ಮಟ್ಟ ಹೆಚ್ಚುತ್ತಿದ್ದು, ಪಶ್ಚಿಮ ಕರಾವಳಿ ನಗರಗಳು ಮುಳುಗುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 2040ರ ವೇಳೆಗೆ ಮಂಗಳೂರು ಮತ್ತು ಉಡುಪಿಯಲ್ಲಿ ಶೇ.5ರಷ್ಟು ಭೂಮಿ ಮುಳುಗಡೆಯಾಗಬಹುದು ಎಂದು ಹೇಳಲಾಗಿದೆ.
ವರ್ಷಗಳ ಹಿಂದೆ ನಿರ್ಮಾಣವಾದ ಸಮುದ್ರ ತೀರದ ಮನೆಗಳು ಅಲೆಗಳಿಂದ ಅಧಿಕ ಅಂತರದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೀಗ ಅಲೆಗಳು ಬಹು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಮನೆಗಳಿಗೆ ಅಪ್ಪಳಿಸುತ್ತಿವೆ. ಹೀಗಾಗಿ ಸಮುದ್ರವು ಪ್ರತಿ ವರ್ಷ ಗಾತ್ರದಲ್ಲಿ ವಿಸ್ತರಿಸುತ್ತಿದೆ ಎಂದು ವರದಿಯಾಗಿದೆ.
ಈ ಸಂಶೋಧನೆಯನ್ನು ಬೆಂಗಳೂರಿನ ವಿಜ್ಞಾನ, ತಂತ್ರಜ್ಞಾನ ಮತ್ತು ಅಧ್ಯಯನ ಕೇಂದ್ರವು ಮಾಡಿದೆ. ಈ ಅಧ್ಯಯನದಲ್ಲಿ ಹವಾಮಾನ ಬದಲಾವಣೆ ಮತ್ತು ಕರಾವಳಿಯುದ್ದಕ್ಕೂ ಮಾನವ ಅಪಾಯವಿದೆ ಎಂದಿದೆ.
ದಕ್ಷಿಣ ಕನ್ನಡ, ಉಡುಪಿ, ಕೇರಳ, ಗೋವಾ ಮತ್ತು ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಇದೇ ರೀತಿಯ ಬದಲಾವಣೆಗಳು ಸಂಭವಿಸಬಹುದು ಎಂದು ಅಧ್ಯಯನ ಸೂಚಿಸಿದೆ.
Click