- +91 73497 60202
- [email protected]
- November 25, 2024 12:34 PM
ನ್ಯೂಸ್ ನಾಟೌಟ್: ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಮುಡಾ ವಾಪಸ್ ಪಡೆದ ನಿವೇಶನ ಕ್ಕೆ ಬದಲಾಗಿ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಸಿಎಂ ಪತ್ನಿಯೇ ಪತ್ರ ಬರೆದಿದ್ದರು ಎನ್ನಲಾಗಿತ್ತು. ಈಗ ಈ ದಾಖಲೆಗಳನ್ನೇ ತಿರುಚಿರುವ ಆರೋಪ ಬಂದಿದೆ. ‘ಸಿಎಂ ಪತ್ನಿ ಮುಡಾಗೆ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿ ಸಾಕ್ಷ್ಯನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಪತ್ರದಲ್ಲಿ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನ ನೀಡುವಂತೆ ಕೋರಲಾಗಿತ್ತು. ಇದೀಗ ಹಗರಣ ಬೆಳಕಿಗೆ ಬಂದ ಬಳಿಕ ಪತ್ರದಲ್ಲಿ ಈ ವಿಚಾರವನ್ನೇ ಅಳಿಸಲಾಗಿದೆ. ವೈಟ್ನರ್ ಹಾಕಿ, ವಿಜಯನಗರದಲ್ಲಿ ಸೈಟ್ ಕೊಡಿ ಎನ್ನುವ ವಿಚಾರವನ್ನೇ ಅಳಿಸಿ ಹಾಕಲಾಗಿದೆ. ಇದರಲ್ಲಿ ವಿಜಯನಗರ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಕೋರಲಾಗಿತ್ತು ಈ ಸಾಲಿನ ಮೇಲೆ ಅಧಿಕಾರಿಗಳು ವೈಟ್ನರ್ ಹಾಕಿ ಅಳಿಸಿದ್ದಾರೆ’ ಎಂದು ವರದಿ ತಿಳಿಸಿದೆ. ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಸಿಎಂ ಪತ್ನಿ ಪತ್ರ ಬರೆದಿದ್ದರು. ಯಾವ ಸ್ಥಳದಲ್ಲಿ ಎಂದು ಬರೆದ ಜಾಗಕ್ಕೆ ಅಧಿಕಾರಿಗಳು ವೈಟ್‌ನರ್ ಹಾಕಿದ್ದರು. ಸಿಎಂ ಪತ್ನಿ ಬರೆದ ಪತ್ರದ ಮೇಲೆಯೆ ಅನುಮಾನ ಶುರುವಾಗಿದ್ದು, ವಿಜನಗರದಲ್ಲಿಯೇ ಸೈಟ್ ಬೇಕು ಎಂದು ಸಿಎಂ ಪತ್ನಿಯೇ ಪಟ್ಟು ಹಿಡಿದಿದ್ದರಾ ಎನ್ನುವ ಅನುಮಾನ ಬಂದಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ