ಬೆಕ್ಕು ಕಚ್ಚಿ ಮಹಿಳೆ ಸಾವು..! ಮನೆಯೊಡತಿಗೆ ಯಮನಾದ ಸಾಕುಪ್ರಾಣಿ..!

ನ್ಯೂಸ್ ನಾಟೌಟ್: ಮನೆಯೊಡತಿಗೆ ಸಾಕಿದ ಬೆಕ್ಕು ಕಚ್ಚಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ನಡೆದಿದೆ. ಬೆಕ್ಕು ಕಚ್ಚಿದ್ದರೂ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ಮಾಡಿದ ಮಹಿಳೆ ರೇಬಿಸ್ ರೋಗಕ್ಕೆ ತುತ್ತಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಮಹಿಳೆ ಗಂಗೀಬಾಯಿ (50) ಎಂದು ಗುರುತಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಮಹಿಳೆಗೆ ಬೆಕ್ಕು ಕಚ್ಚಿದೆ. ಆದರೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದ ಹಿನ್ನೆಲೆಯಲ್ಲಿ ಬೆಕ್ಕಿನ ಜೊಲ್ಲು ರಸದದಿಂದ ಹರಡುವ ರೇಬಿಸ್ ಕಾಯಿಲೆ ಬಂದು ಮಹಿಳೆ ಮೃತಪಟ್ಟಿದ್ದಾರೆ.ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದುದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗಂಗೀಬಾಯಿ ಸಾವನ್ನಪ್ಪಿದ್ದಾರೆ. ಬೆಕ್ಕು ಮಹಿಳೆಯ ಕಾಲಿಗೆ ಕಚ್ಚಿತ್ತು. ಕೂಡಲೇ ವೈದ್ಯರನ್ನು ಸಂಪರ್ಕಿಸಿದಾಗ ಒಂದು ಇಂಜೆಕ್ಷನ್ ಮಾಡಿ, ಇನ್ನೂ 4 ಇಂಜೆಂಕ್ಷನ್ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಒಟ್ಟಾರೆ 5 ಇಂಜೆಕ್ಷನ್ ತೆಗೆದುಕೊಳ್ಳಬೇಕಿದ್ದ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಅನಾರೋಗ್ಯ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಆಕೆ ಆಸ್ಪತ್ರೆಗೆ ಹೋಗಿಲ್ಲ.ಆದರೆ, ಭತ್ತದ ನಾಟಿ ಸೇರಿದಂತೆ ದೈನಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆ ಸಾಕಿದ್ದ ಬೆಕ್ಕಿಗೆ ಅವರ ಮನೆಯಲ್ಲಿದ್ದ ಇನ್ನೊಂದು ನಾಯಿ ಕಚ್ಚಿತ್ತು ಎಂದು ತಿಳಿದುಬಂದಿದೆ‌. ಆದರೆ, ನಾಯಿಗೆ ಹುಚ್ಚು ಬಂದ ಹಿನ್ನೆಲೆಯಲ್ಲಿ ಅದನ್ನು ಸಾಯಿಸಲಾಗಿತ್ತು. ಆದರೆ, ನಾಯಿ ಕಚ್ಚಿದ್ದರಿಂದ ಬೆಕ್ಕಿಗೂ ರೇಬಿಸ್ ರೋಗ ಬಂದಿತ್ತು ಎನ್ನಲಾಗಿದೆ. ಈಗ ಬೆಕ್ಕು ಕಚ್ಚಿದ್ದರಿಂದ ಮಹಿಳೆಗೆ ರೇಬಿಸ್ ರೋಗ ತಗುಲಿ ಸಾವಿಗೀಡಾಗಿದ್ದಾರೆ. Click