ನ್ಯೂಸ್ ನಾಟೌಟ್: ಅಮಾನತ್ತಾಗಿದ್ದ ಪೊಲೀಸ್ ಪೇದೆಯ ಹೆಸರು ಸಿಎಂ ಪದಕ ಪಟ್ಟಿಯಲ್ಲಿ ಪ್ರಕಟವಾಗಿ ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಮೈಸೂರಿನ (Mysuru) ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ. ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತನಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ಕೃತ್ಯದ ಆರೋಪದ ಮೇಲೆ ಅಮಾನತ್ತಿಗೊಳಗಾಗಿದ್ದುದ್ದೇ ಈತನ ಅರ್ಹತೆಯಾಗಿರುವಂತಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
‘ಕೆಲ ನಾಮಧೇಯಗಳನ್ನು ಕಂಡರೆ ಈ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕಳ್ಳರಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೊಡಮಾಡುವ “ಮುಖ್ಯಮಂತ್ರಿಗಳ ಪದಕ” ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಹಿತಿ ಹಂಚಿಕೊಂಡಿದ್ದಾರೆ.
Click