ಇಂದು(ಆ.16) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯಸ್ಮರಣೆ, ಅಜಾತಶತ್ರುಗೆ ನಮಿಸಿದ ಗಣ್ಯರು

ನ್ಯೂಸ್ ನಾಟೌಟ್: ಇಂದು ಆಗಸ್ಚ್ 16, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೆಹಲಿಯ ‘ಸದೈವ ಅಟಲ್’ ಗೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಜೆಪಿ ನಡ್ಡಾ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಸಂಪುಟದ ಇತರ ಸದಸ್ಯರು ‘ಸದೈವ್ ಅಟಲ್’ನಲ್ಲಿ ಇಂದು ಬೆಳಗ್ಗೆ ನೆರವೇರಿದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದರು. “ನಮ್ಮ ಸ್ಫೂರ್ತಿಯ ಮೂಲವಾದ ಮಾಜಿ ಪ್ರಧಾನಿ, ಭಾರತರತ್ನ, ಅಟಲ್ ಬಿಹಾರಿ ವಾಜಪೇಯಿಗೆ ಅವರ ಪುಣ್ಯತಿಥಿಯಂದು ನಮನಗಳು” ಎಂದು ಬಿಜೆಪಿ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ.ವಾಜಪೇಯಿ ಅವರ ಸಾಕು ಮಗಳು ನಮಿತಾ ಕೌಲ್ ಭಟ್ಟಾಚಾರ್ಯ ತಮ್ಮ ತಂದೆಯ ಪುಣ್ಯತಿಥಿಯಂದು ಅವರಿಗೆ ಪುಷ್ಪ ನಮನ ಸಲ್ಲಿಸಲು ‘ಸದೈವ್ ಅಟಲ್’ಗೆ ಆಗಮಿಸಿದರು. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಕೂಡ ‘ಸದೈವ್ ಅಟಲ್’ ಸ್ಮಾರಕದಲ್ಲಿ ಉಪಸ್ಥಿತರಿದ್ದರು. Click