ನ್ಯೂಸ್ ನಾಟೌಟ್: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಮಹಿಳೆಯದ್ದು ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಗೆ ಸಂಬಂಧಿಸಿದಂತೆ ಬೆದರಿಕೆ ಕರೆ ಬರುತ್ತಿರುವುದಾಗಿ ಆರೋಪಿಸಿ ದೂರು ನೀಡಲು ಮಹಿಳೆ ಆ.29ರ ಗುರುವಾರ ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದಿದ್ದರು ಎನ್ನಲಾಗಿದೆ.
ಆಡಿಯೋ ವೈರಲ್ ಬಳಿಕ ಮಹಿಳೆಗೆ ಹಲವಾರು ಬೆದರಿಕೆ ಕರೆ ಬಂದಿದ್ದು, ಈ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಇನ್ಸ್ಪೆಕ್ಟರ್ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ತಡರಾತ್ರಿ ಠಾಣೆಗೆ ಬಂದ ಮಹಿಳೆಯನ್ನು ಬಳಿಕ ಆಟೋ ರಿಕ್ಷಾದಲ್ಲಿ ತೆರಳುವಂತೆ ಸೂಚಿಸಿದ ಪೊಲೀಸರು ಹಿಂದಿನಿಂದ ಪೊಲೀಸ್ ಜೀಪಿನಲ್ಲಿ ಮನೆಯ ತನಕ ಭದ್ರತೆ ನೀಡಿದರು ಎಂದು ವರದಿ ತಿಳಿಸಿದೆ.