ನ್ಯೂಸ್ ನಾಟೌಟ್: ಮನುಷ್ಯ ಹುಟ್ಟುವಾಗಲೂ ಏನೂ ತೆಗೆದುಕೊಂಡು ಬರುವುದಿಲ್ಲ, ಹೋಗುವಾಗಲೂ ಏನೂ ತೆಗೆದುಕೊಂಡು ಹೋಗುವುದಿಲ್ಲ. ಈ ನಡುವೆ ಮನುಷ್ಯ ಕಷ್ಟದಲ್ಲಿರುವ ಮತ್ತೊಬ್ಬ ಮನುಷ್ಯನಿಗೆ ಸಹಾಯವಾಗಬೇಕು. ಈ ಮಾತನ್ನು ಇಲ್ಲಿ ಯಾಕೆ ಇಲ್ಲಿ ಹೇಳುತ್ತಿದ್ದೇವೆ ಅಂದ್ರೆ ಎರಡು ಪುಟ್ಟ ಮಕ್ಕಳ ತಾಯಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಮತ್ತೆ ಎಲ್ಲರಂತೆ ಆಗಬೇಕು ಆ ಪುಟ್ಟ ಮಕ್ಕಳ ಬದುಕಿಗೆ ಆಸರೆಯಾಗಬೇಕು ಅನ್ನುವುದಾದರೆ ಈಗ ಈ ತಾಯಿಗೆ ಅಗತ್ಯ ಚಿಕಿತ್ಸೆಯ ನೆರವು ಬೇಕಿದೆ.
ಅರಂತೋಡು ಗ್ರಾಮದ ಅಡ್ಕಬಳೆ ನಿವಾಸಿ ವಿಜಯ್ ಅನ್ನುವವರ ಪತ್ನಿ ಮಮತಾ (28 ವರ್ಷ) ಜಿ ಬಿ ಸಿಂಡ್ರಾಮ್ಸ್ (G B syndrome ) ಎಂಬ ಕಾಯಿಲೆ ತುತ್ತಾಗಿದ್ದಾರೆ. ಮನುಷ್ಯನ ತಲೆಗೆ ಸಂದೇಶ ಕಳಿಸುವ ನರದ ಮೇಲೆ ಅಟ್ಯಾಕ್ ಮಾಡುವ ಗಂಭೀರ ಕಾಯಿಲೆಗೆ ಇದಾಗಿದೆ. ಸದ್ಯ ಅವರ ಚಿಕಿತ್ಸೆ 4 ಲಕ್ಷ ರೂ. ಖರ್ಚಾಗಬಹುದು ಎಂದು ಹೇಳಲಾಗಿದೆ. ಆರ್ಥಿಕವಾಗಿ ಕುಟುಂಬ ತುಂಬಾ ಸಂಕಷ್ಟದಲ್ಲಿದೆ. ಅವರಲ್ಲಿ ಭರಿಸಲು ಹಣವೂ ಇಲ್ಲ. ಮನೆಯಲ್ಲಿ 4 ವರ್ಷದ ಗಂಡು ಮಗು ಹಾಗೂ 8 ತಿಂಗಳ ಹೆಣ್ಣು ಕಂದಮ್ಮವಿದೆ. ತಾಯಿ ಇರುವ ಇಂತಹ ಸ್ಥಿತಿಯಲ್ಲಿ ಮಕ್ಕಳನ್ನು ನೋಡುವುದಕ್ಕೂ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಾಂತ್ರಿಕ ಕಾರಣಗಳಿಂದ ಗೂಗಲ್ ಪೇ/ ಫೋನ್ ಪೇಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಹಣ ವರ್ಗಾವಣೆ ಅಸಾಧ್ಯವಾಗಿದೆ. ಹೀಗಾಗಿ ಕೆಳಗೆ ನೀಡಿರುವ ಅಕೌಂಟ್ ನಂಬರ್ ಗೆ ಹಣ ಕಳಿಸಿ ಸಹೃದಯಿ ಧಾನಿಗಳು ನೆರವಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.