ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಮಲಯಾಳಂ ನಟಿ..! ಖ್ಯಾತ ನಟ ರಾಜಕೀಯ ಜೀವನದಲ್ಲಿ ಫುಲ್ ಬ್ಯುಸಿ, ಅಭಿಮಾನಿಗಳಿಗೆ ನಿರಾಸೆ..!

ನ್ಯೂಸ್‌ ನಾಟೌಟ್‌: ದಳಪತಿ ವಿಜಯ್ ಮುಂದಿನ ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಕೂಡ ನಟಿಸಬಹುದು ಎಂಬ ವದಂತಿಗಳು ಹರಿದಾಡುತ್ತಿವೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 69’ ಎಂದು ಹೆಸರು ಇಡಲಾಗಿದೆ. ಈ ಚಿತ್ರದಲ್ಲಿ ಮಮಿತಾ ಕೂಡ ಒಂದು ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿವೆ. ದಳಪತಿ ವಿಜಯ್ ಸದ್ಯ ರಾಜಕೀಯದಲ್ಲಿ ಬ್ಯುಸಿ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೆ ಪಕ್ಷವನ್ನು ಕೂಡ ಘೋಷಣೆ ಮಾಡಿದ್ದಾರೆ. ಸದ್ಯ ‘GOAT’ ಚಿತ್ರದಲ್ಲಿ ನಟಿಸುತ್ತಿರುವ ಅವರು, ಆ ಬಳಿಕ ಅವರು ವೃತ್ತಿ ಜೀವನದ ಕೊನೆಯ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಮಮಿತಾ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ‘ದಳಪತಿ 69’ ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸುತ್ತಾರೆ ಎಂದು ವರದಿ ಆಗಿದೆ. ವರದಿಗಳ ಪ್ರಕಾರ ಮಮಿತಾ ಅವರು ನಾಯಕಿ ಅಲ್ಲ, ಬದಲಿಗೆ ವಿಜಯ್ ಸಹೋದರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. Click