ನ್ಯೂಸ್ ನಾಟೌಟ್: ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಪೀಡಿಯಾಟ್ರಿಕ್ಸ್ ವಿಭಾಗ ಮತ್ತು ಸಮುದಾಯ ವೈದ್ಯಕೀಯಶಾಸ್ತ್ರ ವಿಭಾಗದಿಂದ ವಿಶ್ವ ಒಆರ್ ಎಸ್ (ಓರಲ್ ರಿಹೈಡ್ರೇಶನ್ ಸೊಲ್ಯೂಷನ್) ಸಪ್ತಾಹ ಕಾರ್ಯಕ್ರಮವನ್ನು ಗುರುವಾರ (ಜುಲೈ 25) ಬೂಡು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಒಆರ್ಎಸ್ ಸಪ್ತಾಹದ ಕುರಿತು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ಸುಧಾ ರುದ್ರಪ್ಪ ಮಾಹಿತಿ ನೀಡಿದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಡಾ. ದಿನೇಶ್ ಪಿ.ವಿ. ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವೀಧರ ಡಾ.ಎಂ.ರಾಜಸುದರ್ಶನ ಒಆರ್ಎಸ್ ತಯಾರಿಸುವುದು ಮತ್ತು ಬಳಸುವುದು ಹೇಗೆ ಹಾಗೂ ರೆಡಿಮೇಡ್ ಒಆರ್ಎಸ್ ಲಭ್ಯವಿಲ್ಲದಿದ್ದರೆ ಮನೆಯಲ್ಲಿ ಸಕ್ಕರೆ, ಉಪ್ಪು ಮತ್ತು ನೀರಿನಿಂದ ಹೇಗೆ ತಯಾರಿಸಲಾಗುತ್ತದೆ ಎಂಬುದರ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮೆಡಿಕೋ ಸೋಶಿಯಲ್ ವರ್ಕರ್ ಉದಯ್ ಕುಮಾರ್ ಮತ್ತು ಬೂಡು ಅಂಗನವಾಡಿ ಶಿಕ್ಷಕಿ ಕವಿತಾ ಭಾಗವಹಿಸಿದ್ದರು.