ನ್ಯೂಸ್ ನಾಟೌಟ್: ಹುಬ್ಬಳ್ಳಿಯ ಈಶ್ವರನಗರದ ಶ್ರೀ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೆಂದ್ರಪ್ಪ ಮಹಾದೇವಪ್ಪ ವನಹಳ್ಳಿ (63) ಕೊಲೆ ಮಾಡಿದ್ದ ಹಂತಕನನ್ನು ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಹುಬ್ಬಳ್ಳಿಯ ಕಮರಿಪೇಟೆ ಜಿ. ಅಡ್ಡಾ ನಿವಾಸಿ, ಆಟೋ ರಿಕ್ಷಾ ಚಾಲಕ ಸಂತೋಷ ಬೋಜಗಾರ ಬಂಧಿತ ಎಂದು ಗುರುತಿಸಲಾಗಿದೆ. ದೇವಪ್ಪಜ್ಜನ ಪೂಜಾ-ವಿಧಾನಗಳಿಂದಲೇ ನಾವು ಆರ್ಥಿಕವಾಗಿ ಹಾಳಾಗಲು, ಮಾನಸಿಕವಾಗಿ ತೊಂದರೆ ಅನುಭವಿಸಲು ಕಾರಣ ಎಂದು ಹೇಳಿ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.
ಬಾನುವಾರ(ಜು.21) ಸಂಜೆ ಮಂದಿರದ ಹಿಂಬದಿ ಗೇಟ್ನಲ್ಲಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಸೋಮವಾರ ರಾತ್ರಿ ಬಂಧಿಸಲಾಗಿದೆ. ಈತ ಎರಡೂವರೆ ವರ್ಷಗಳಿಂದ ಹತ್ಯೆಗೆ ಸಂಚು ಹಾಕಿದ್ದ. ಆ ನಿಟ್ಟಿನಲ್ಲಿ ದೇವಪ್ಪಜ್ಜನನ್ನು ಹಿಂಬಾಳಿಸುತ್ತಿದ್ದ. ಈ ಹಿಂದೆ 2022ರ ಮಾರ್ಚ್ನಲ್ಲಿ ದೇವಪ್ಪಜ್ಜನ ವಿದ್ಯಾನಗರದ ನಿವಾಸದಲ್ಲೂ ಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾಗಿದೆ.
Click