ಪ್ರಚಾರಕ್ಕಾಗಿ ತನ್ನದೇ ಖಾಸಗಿ ವಿಡಿಯೋ ಲೀಕ್ ಮಾಡಿದ್ರಾ ಈ ನಟಿ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ನಟಿ ಊರ್ವಶಿ ರೌಟೆಲ್ಲಾರ ಖಾಸಗಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಊರ್ವಶಿ ರೌಟೆಲ್ಲಾ ಬಾತ್​ರೂಂನಲ್ಲಿ ವಿವಸ್ತ್ರರಾಗುತ್ತಿದ್ದಾರೆ. ಆದರೆ ಈ ವಿಡಿಯೋವನ್ನು ಪ್ರಚಾರಕ್ಕಾಗಿ ಖುದ್ದು ಊರ್ವಶಿಯೇ ಲೀಕ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಹಿಂದೆ ಕ್ರಿಕೆಟಿಗ ರಿಷಬ್ ಪಂಥ್ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ಸುದ್ದಿಯಾಗಿದ್ದ ನಟಿ ಊರ್ವಶಿ ರೌಟೆಲಾ ಈಗ ತಮ್ಮದೇ ಖಾಸಗಿ ವಿಡಿಯೋವನ್ನು ಪ್ರಚಾರಕ್ಕಾಗಿ ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗುತ್ತಿದೆ. ಈ ವಿಡಿಯೋವನ್ನು ಊರ್ವಶಿ ರೌಟೆಲ್ಲಾ ಬಾತ್​ರೂಂ ವಿಡಿಯೋ ಲೀಕ್ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ. View this post on Instagram A post shared by Manav Manglani (@manav.manglani) ಈ ಹಿಂದೆಯೂ ಕೆಲವು ಬಾರಿ ಊರ್ವಶಿ ರೌಟೆಲ್ಲಾ ಪ್ರಚಾರಕ್ಕಾಗಿ ಕೆಲವು ಸ್ಟಂಟ್​ಗಳನ್ನು ಮಾಡಿದ್ದಿದೆ. ಈ ಹಿಂದೆ ತಮ್ಮ ತಾರಾ ಮೌಲ್ಯದ ಬಗ್ಗೆ ಸುಳ್ಳು ಹೇಳಿ ಟ್ರೋಲ್ ಆಗಿದ್ದರು. ರಿಷಬ್ ಪಂತ್ ಬಗ್ಗೆ ಮಾತನಾಡಿಯೂ ಟ್ರೋಲ್ ಆಗಿದ್ದರು. ಈಗ ತಮ್ಮದೇ ಖಾಸಗಿ ವಿಡಿಯೋ ಲೀಕ್ ಮಾಡಿಸಿ ಸುದ್ದಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಯಾವುದೋ ಸಿನಿಮಾ ದೃಶ್ಯವೋ ಅಥವಾ ಡೀಫ್ ಫೇಕ್ ಆಗಿರಬಹುದೋ ಎಂಬ ಶಂಕೆಯೂ ವ್ಯಕ್ತವಾಗಿದೆ. Click 👇