ಚಿತ್ರೀಕರಣದ ವೇಳೆ ಕಾಲು ಮುರಿದುಕೊಂಡ ನಟಿ ಊರ್ವಶಿ ರೌಟೇಲಾ..! ಆಸ್ಪತ್ರೆಗೆ ದಾಖಲು..!

ನ್ಯೂಸ್ ನಾಟೌಟ್: ಕನ್ನಡದ ‘ಐರಾವತ’ ನಟಿ ಊರ್ವಶಿ ರೌಟೇಲಾ ಬಾಲಯ್ಯ ನಟನೆಯ 109ನೇ ಸಿನಿಮಾದ ಶೂಟಿಂಗ್‌ನಲ್ಲಿ ನಟಿ ಕಾಲಿಗೆ ಏಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಬಾಲಯ್ಯ (Balayya) ಹೊಸ ಸಿನಿಮಾದಲ್ಲಿ ಊರ್ವಶಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊವರ್ಶಿ ಕಾಲಿಗೆ ಪೆಟ್ಟಾಗಿದ್ದು, ಕಾಲು ಮುರಿತವಾಗಿದೆ ಎನ್ನಲಾಗಿದೆ. ಕೂಡಲೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದು, ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. Click 👇