ಶಾಲಾ ಕೊಠಡಿಯೊಳಗೆ ಹೆಡ್‌ ಮಾಸ್ಟರ್‌ ಮತ್ತು ಶಿಕ್ಷಕಿಯ ರಾಸಲೀಲೆ..! ಖಾಸಗಿ ವಿಡಿಯೋ ಎಲ್ಲೆಡೆ ವೈರಲ್..!

ನ್ಯೂಸ್ ನಾಟೌಟ್: ವಿದ್ಯೆ ಬೋಧಿಸಬೇಕಾದ ಕೊಠಡಿಯಲ್ಲಿ ಶಿಕ್ಷಕರು ಪ್ರಣಯದಲ್ಲಿ ಮುಳುಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲದಿನಗಳಿಂದ ಭಾರೀ ವೈರಲ್ ಆಗುತ್ತಿದೆ. ಶಾಲಾ ಮುಖ್ಯ ಶಿಕ್ಷಕನೊಬ್ಬ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇದೀಗ ಅವರಿಬ್ಬರ ಖಾಸಗಿ ಕ್ಷಣದ ವಿಡಿಯೋಗಳು ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್‌, ಇನ್ಸ್‌ಟಾಗ್ರಾಂ, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಜಾನ್‌ಪುರ ಎಂಬಲ್ಲಿ ಸುಮಾರು 8 ದಿನಗಳ ಹಿಂದೆ ಆದರೆ, ಈಗ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಮುಖ್ಯ ಶಿಕ್ಷಕನೊಬ್ಬ, ಶಿಕ್ಷಕಿಯನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡು ತನ್ನ ತೋಳುಗಳಲ್ಲಿ ಎತ್ತುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ನಂತರ ಆಕೆಯನ್ನು ತಬ್ಬಿಕೊಂಡ ಆತ ತುಟಿಗೆ ತುಟಿ ಇಟ್ಟು ದೀರ್ಘವಾಗಿ ಚುಂಬಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಶಿಕ್ಷಕಿಯ ಬೆನ್ನು ಸೇರಿದಂತೆ ದೇಹದಲ್ಲೆಲ್ಲ ಕೈಯಾಡಿಸುವ ದೃಶ್ಯವೂ ವಿಡಿಯೋದಲ್ಲಿ ಇದೆ. ನಂತರ ಆತ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಾನೆ. ವಿಡಿಯೋದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಮಹಾರಾಣಾ ಪ್ರತಾಪ್, ಭಗತ್ ಸಿಂಗ್ ಮತ್ತು ಇತರ ಹೆಸರಾಂತ ವ್ಯಕ್ತಿಗಳ ಫೋಟೋಗಳು ಕೋಣೆಯ ಗೋಡೆಗಳ ಮೇಲೆ ನೇತಾಡುತ್ತಿವೆ. ಈ ಬಗ್ಗೆ ಜನಾಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.