ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ವತಿಯಿಂದ ಜುಲೈ 25 ಮತ್ತು 26 ರಂದು ಧಾರವಾಡ ಆರ್.ಎನ್ ಶೆಟ್ಟಿ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 8ನೇ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಳ್ಯದ ಕೆ.ವಿ.ಜಿ. ಕಾನೂನು ಕಾಲೇಜಿನ ಕ್ರೀಡಾಪಟುಗಳು ವಿಶೇಷ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಲಾವಣ್ಯ ಎನ್. 5000 ಮೀ. ಓಟದಲ್ಲಿ ಪ್ರಥಮ, ವನ್ಯಶ್ರೀ ಕೆ.ಎಚ್. 100 ಮೀ. ಓಟದಲ್ಲಿ ದ್ವಿತೀಯ ಹಾಗೂ 200 ಮೀ. ಓಟದಲ್ಲಿ ದ್ವಿತೀಯ, ರಕ್ಷಿತ್ ಕುಮಾರ್ ಐ.ಪಿ. 100 ಮೀ. ಓಟದಲ್ಲಿ ದ್ವಿತೀಯ, ಬ್ರಿಜೇಶ್ ಎಂ. ತ್ರಿವಿಧ ಜಿಗಿತದಲ್ಲಿ ಚತುರ್ಥ ಸ್ಥಾನಗಳಿಸಿರುತ್ತಾರೆ.
ಕೆ.ವಿ.ಜಿ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಮಿಥನ್ ಎಸ್. ಇವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದು, ಅಲ್ಲದೇ ಕ್ರೀಡಾ ವ್ಯವಸ್ಥಾಪಕರಿಗೆ ಆಯೋಜಿಸಿದ್ದ ಪುರುಷರ ವಿಭಾಗದ 100 ಮೀ. ಓಟ (45 ವರ್ಷಕ್ಕಿಂತ ಕೆಳಗಿನವರು)ದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಮಿಥನ್ ಎಸ್. ಹಾಗೂ ಸಾಧನೆಗೈದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.