ಸುಬ್ರಹ್ಮಣ್ಯ: ತಡರಾತ್ರಿ ತೇಲಿ ಬಂದ ಆನೆಯ ಕಳೇಬರ..! ಆ ದೃಶ್ಯ ಕಂಡು ಶಾಕ್ ಆದ ಸ್ಥಳೀಯರು..!

ನ್ಯೂಸ್ ನಾಟೌಟ್: ವಿಪರೀತ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಈ ನಡುವೆ ಆನೆಯ ಕಳೇಬರ ನೆರೆ ನೀರಿಗೆ ನದಿಯಲ್ಲಿ ತೇಲಿ ಬಂದ ಘಟನೆ ಸುಬ್ರಹ್ಮಣ್ಯದಲ್ಲಿ ವರದಿಯಾಗಿದೆ. ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದ್ದು, ಸೋಮವಾರ(ಜುಲೈ.17) ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಕುಮಾರಧಾರ ನದಿಯಲ್ಲಿ ನೀರು ಎಷ್ಟಿದೆ ಎಂದು ನೋಡಲು ತೆರಳಿದ ಮನ್ಮಥ ಬಟ್ಟೋಡಿ ಎಂಬವರಿಗೆ ಆನೆಯ ಕಳೇಬರ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವರು ವೀಡಿಯೋದಲ್ಲಿ ಆನೆಯ ಕಳೇಬರ ತೇಲಾಡುವ ದೃಶ್ಯವನ್ನು ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ.