ನ್ಯೂಸ್ ನಾಟೌಟ್ : ಇಂಗ್ಲೆಂಡ್ನ ಪೋರ್ಟ್ಸ್ ಮೌತ್ ಬಂದರಿನಲ್ಲಿ ಮಂಗಳವಾರ(ಜು.24) ಬೆಳಗ್ಗೆ ತಿಮಿಂಗಿಲವೊಂದು ಹಡಗೊಂದಕ್ಕೆ ಹಾರಿ ಅದನ್ನು ಪಲ್ಟಿ ಮಾಡಿದ ಘಟನೆ ನಡೆದಿದೆ.
ಈ ಭಯಾನಕ ಘಟನೆಯನ್ನು ಹತ್ತಿರದಲ್ಲಿದ್ದ ಹಡಗಿನವರು ವಿಡಿಯೊ ಮಾಡಿದ್ದಾರೆ.ವಿಡಿಯೊದಲ್ಲಿ ಪೋರ್ಟ್ಸ್ ಮೌತ್ ಕರಾವಳಿಯಿಂದ ಅರ್ಧ ಮೈಲಿ ದೂರದಲ್ಲಿ ಲಂಗರು ಹಾಕಿದ್ದ ಹಡಗಿನ ಮೇಲ್ಭಾಗದಿಂದ 30 ಅಡಿ ಉದ್ದದ ತಿಮಿಂಗಿಲ ನೆಗೆದಿದೆ. ಅದರ ತಲೆ 23 ಅಡಿ ಉದ್ದದ ಹಡಗಿಗೆ ಡಿಕ್ಕಿ ಹೊಡೆದು ಅದನ್ನು ಪಲ್ಟಿಯಾಗಿಸಿದೆ.
ಕಾಲಿನ್ ಯಾಗರ್ (16) ಮತ್ತು ಅವರ ಸಹೋದರ ವ್ಯಾಟ್ (19) ಎಂಬುವರು ಬಂದರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ತಕ್ಷಣ ಬೇರೆ ಹಡಗಿನವರು ಅವರಿಗೆ ಸಹಾಯ ಮಾಡಲು ಧಾವಿಸಿದ್ದಾರೆ. ಒಬ್ಬ ವ್ಯಕ್ತಿ ಪಲ್ಟಿಯಾದ ಹಡಗಿನಿಂದ ಜಿಗಿದರೆ, ಇನ್ನೊಬ್ಬನು ಜಿಗಿಯಲು ಸಾಧ್ಯವಾಗದೆ ಹಡಗಿನೊಳಗೇ ಈಜಿ ಪಾರಾಗಿದ್ದಾನೆ. ಇಬ್ಬರಿಗೂ ಯಾವುದೇ ಹೆಚ್ಚಿನ ಗಾಯವಾಗಿಲ್ಲ.