ಪತ್ನಿಗೆ ಚಾಕುವಿನಿಂದ ಇರಿದ ಕಿರುತೆರೆ ನಟ..! ಮತ್ತೊಬ್ಬಳ ಜತೆ ನಿಶ್ಚಿತಾರ್ಥ, ಏನಿದು ನಟನ ಕಾಮ ಪುರಾಣ..?

ನ್ಯೂಸ್ ನಾಟೌಟ್: ಕಿರುತೆರೆ ದಾರವಾಹಿಯ ನಟನೊಬ್ಬ (Serial actor) ತನ್ನ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ‘ನೇತ್ರಾವತಿ’ ಹೆಸರಿನ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್ (Sunny Mahipal) ಪತ್ನಿಗೆ ಹಲ್ಲೆ ನಡೆಸಿದ್ದಾರೆ ಹಾಗೂ ಮದುವೆ ಬಳಿಕ ಬೇರೆ ಹುಡುಗಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮಾಡಲಾಗಿದೆ. ‘ನೇತ್ರಾವತಿ’ಧಾರಾವಾಹಿ ಬಳಿಕಸನ್ನಿ ಮಹಿಪಾಲ್‌ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆ ಸನ್ನಿ ಮಹಿಪಾಲ್‌ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ ಎನ್ನಲಾಗಿದೆ. ಯುವತಿ ಎರಡು ತಿಂಗಳ ಗರ್ಭಿಣಿ ಆದ ಬಳಿಕ ಜೂನ್‌ 15ರಂದು ಆತ ಆಕೆಯ ಜೊತೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ. ಇದಾದ ನಂತರ ಸನ್ನಿ ಮಹಿಪಾಲ್‌ ಮನೆಯವರನ್ನು ಒಪ್ಪಿಸಿ ಬರುವೆ, ಅಲ್ಲಿಯವರೆಗೆ ಸ್ನೇಹಿತೆಯಂತೆ ಇರಬೇಕೆಂದು ಹೇಳಿ ತೆರಳಿದ್ದಾನೆ. ಇದಕ್ಕೆ ಯುವತಿ ಸರಿಯೆಂದು ಹೇಳಿದ್ದಾಳೆ. ಆದರೆ ಕೆಲ ದಿನಗಳ ಹಿಂದೆ ಸನ್ನಿ ಮಹಿಪಾಲ್‌ ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಆತನ ಪತ್ನಿ ಜು.22ರಂದು ವಿಜ್ಞಾನ ನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿ, ಸನ್ನಿ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ಪ್ರಶ್ನಿಸಿದ್ದಾರೆ. ಈ ವೇಳೆ ಸನ್ನಿ ಮಹಿಪಾಲ್‌ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಸನ್ನಿ ಮಹಿಪಾಲ್‌ ಪತ್ನಿಗೆ ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಈ ಗಲಾಟೆಯಲ್ಲಿ ಹೊಟ್ಟೆಗೆ ಏಟು ಬಿದ್ದು ಗರ್ಭಪಾತ ಆಗಿರೋದಾಗಿಯೂ ಕೂಡ ಪತ್ನಿ ಹೇಳಿಕೆ ನೀಡಿದ್ದಾರೆ. ಗಲಾಟೆ ವೇಳೆ ಯುವತಿ 112ಕ್ಕೆ ಮಹಿಪಾಲ್ ಪತ್ನಿ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಬಂದಾಗ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ನಮ್ಮ ಬಳಿ ಮಹಿಳಾ ಸಿಬ್ಬಂದಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಯುವತಿ ತಾನೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಳಿಕ ಆತ ಬಲವಂತವಾಗಿ ಈ ಮದುವೆ ಆಗಿದ್ದೇನೆ ಎಂದು ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. Click