- +91 73497 60202
- [email protected]
- November 22, 2024 2:29 PM
ನ್ಯೂಸ್ ನಾಟೌಟ್: ರಷ್ಯಾ (Russia) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ ಏಜೆಂಟ್‍ಗಳಿಂದ ಮೋಸ ಹೋಗಿ ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರವ ಭಾರತೀಯರನ್ನು ಬಿಡುಗಡೆ ಮಾಡುವಂತೆ ಚರ್ಚಿಸಿದ್ದಾರೆ. ಚರ್ಚೆಯ ಬಳಿಕ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ರಷ್ಯಾ ನಿರ್ಧರಿಸಿದೆ ಎನ್ನಲಾಗಿದೆ. ಸುಮಾರು 24ಕ್ಕೂ ಹೆಚ್ಚು ಭಾರತೀಯರು ಹೆಚ್ಚಿನ ಸಂಬಳದ ಉದ್ಯೋಗದ ಆಸೆಗೆ ಏಜೆಂಟ್‍ಗಳಿಂದ ಮೋಸ ಹೋಗಿದ್ದಾರೆ. ಬಳಿಕ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗಿದೆ ಎಂದು ಹೇಳಲಾಗಿತ್ತು.ಈ ಪ್ರಕರಣದ ವಿಚಾರವಾಗಿ, ಭಾರತೀಯ ತನಿಖಾ ಸಂಸ್ಥೆಗಳು ಕೂಡ ದಾಳಿ ನಡೆಸಿ ಭಾರತೀಯರನ್ನು ರಷ್ಯಾಕ್ಕೆ ಸಾಗಿಸುವ ಜಾಲವನ್ನು ಭೇದಿಸಿವೆ.ಈ ಅನಧಿಕೃತ ಸಂಸ್ಥೆಗಳು ಕನಿಷ್ಠ 35 ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿವೆ ಎಂದು ತಿಳಿದುಬಂದಿದೆ. ಎರಡು ದಿನಗಳ ಪ್ರವಾಸಕ್ಕಾಗಿ ರಷ್ಯಾಕ್ಕೆ ತೆರಳಿರುವ ಮೋದಿ, ಸೋಮವಾರ(ಜುಲೈ.8) ಸಂಜೆ ಪುಟಿನ್ ಆಯೋಜಿಸಿದ್ದ ಔತಣಕೂಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ಅವರನ್ನು ಭಾರತಕ್ಕೆ ಕಳಿಸಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದಾರೆ. ಮೋದಿಯ ಈ ಬೇಡಿಕೆಗೆ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಔತಣಕೂಟದಲ್ಲಿ, ಪುಟಿನ್ 3 ನೇ ಬಾರಿಗೆ ಪ್ರಧಾನಿಯಾಗಿ ಪುನರಾಯ್ಕೆಯಾಗಿರುವ ಮೋದಿಯವರನ್ನು ಅಭಿನಂದಿಸಿದರು. ಭಾರತದ ಆರ್ಥಿಕತೆಯ ಏರುತ್ತಿರುವ ಸ್ಥಾನಮಾನದ ಬಗ್ಗೆ ಚರ್ಚಿಸಿದ್ದಾರೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ