ನ್ಯೂಸ್ ನಾಟೌಟ್: ಡೆಂಗ್ಯೂ (Dengue) ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಇಲಿ ಜ್ವರಕ್ಕೆ ರಾಜ್ಯದಲ್ಲಿ ಮೊದಲ ಸಾವಾಗಿದೆ. ಹಾವೇರಿಯ (Haveri) ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ವೃದ್ಧ ಉಮೇಶ್ (72) ಇಲಿಜ್ವರದಿಂದ ಸಾವನ್ನಪ್ಪಿದ್ದಾರೆ. 15 ದಿನಗಳಿಂದ ಹಾವೇರಿ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನಲ್ಲಿ ರಕ್ತ ಪರೀಕ್ಷೆ ಬಳಿಕ ಇಲಿ ಜ್ವರ ಇರುವುದು ಪತ್ತೆಯಾಗಿದೆ. ವೃದ್ಧ ಕಿಡ್ನಿ ವೈಫಲ್ಯದೊಂದಿಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2 ದಿನ ಚಿಕಿತ್ಸೆ ಪಡೆದ ನಂತರ ವೃದ್ಧ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Click 👇