ನ್ಯೂಸ್ ನಾಟೌಟ್: ಕಾಲೇಜೊಂದರಲ್ಲಿ ಪ್ರಾಂಶುಪಾಲರನ್ನು ಪೇಪರ್ ಸೋರಿಕೆ ಪ್ರಕರಣದಲ್ಲಿ ವಜಾಗೊಳಿಸಿದ ನಂತರ ಅವರ ಕಚೇರಿಯಿಂದ ತೆರಳದ ಕಾರಣ ಬಲವಂತವಾಗಿ ಹೊರಹಾಕಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ನಡೆದಿದೆ.
ಬಿಷಪ್ ಜಾನ್ಸನ್ ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾದ ಪಾರುಲ್ ಸೊಲೊಮನ್ ಎಂಬಾಕೆ ಪೇಪರ್ ಸೋರಿಕೆಯ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸಾಬೀತಾಗಿ ಪ್ರಾಂಶುಪಾಲರ ಸ್ಥಾನದಿಂದ ವಜಾಗೊಳಿಸಲಾಯಿತು. ಆದರೆ ಅವರ ಕುರ್ಚಿಯನ್ನು ಖಾಲಿ ಮಾಡಲು ಆಕೆ ನಿರಾಕರಿಸಿದ್ದರು.
ಈ ಪರಿಸ್ಥಿತಿಯಲ್ಲಿ ಶಾಲೆಯ ಸಿಬ್ಬಂದಿ ಅವರನ್ನು ಬಲವಂತವಾಗಿ ಕಚೇರಿಯಿಂದ ಹೊರಗೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಲಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯೂ ನಡೆದಿದೆ.
Click 👇